Showing posts with label ವಂದಿಪೆ ನಾ ನಿನ್ನನು ಸೊಂಡಿಲ kamalanabha vittala. Show all posts
Showing posts with label ವಂದಿಪೆ ನಾ ನಿನ್ನನು ಸೊಂಡಿಲ kamalanabha vittala. Show all posts

Friday, 27 December 2019

ವಂದಿಪೆ ನಾ ನಿನ್ನನು ಸೊಂಡಿಲ ankita kamalanabha vittala

by ನಿಡಗುರುಕಿ ಜೀವೂಬಾಯಿ  ಗಣೇಶ ಪ್ರಾರ್ಥನೆ
ವಂದಿಪೆ ನಾ ನಿನ್ನನು ಸೊಂಡಿಲ ಗಣಪ ಧಬಂದೆನ್ನ ಸಲಹೊ ನೀನು ಪ

ಪುಂಡರೀಕಾಕ್ಷನುದ್ದಂಡ ಪರಾಕ್ರಮಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ಅಪಪಾಶಾಂಕುಶಧರನೇ ವೂೀದಕಹಸ್ತಭಾಷಿಗ ನೀನಹುದೋಆಶಾಪಾಶಗಳಿಂದ ಘಾಸಿಗೊಂಡಿಹ ಮನಬೇಸರ ಕಳೆದೆಮ್ಮ ಪೋಷಿಪನನು ತೋರೊ 1

ಗೌರಿಯ ವರಪುತ್ರನೆ ಪ್ರಾರ್ಥಿಸುವೆ ಶ್ರೀ-ಶೌರಿಯಪಾದಸ್ಮರಣೆಗೌರವದಿಂ ಮಾಳ್ಪ ಶೌರ್ಯ ಎನಗೆ ಕೊಟ್ಟುಮಾರಪಿತನಪಾದತೋರಿಸು ತವಕದಿ2

ಅಂತರಂಗದ ಶತ್ರುಗಳಿಂದಲಿ ಮನಚಿಂತೆಗೆ ಗುರಿಗೈಸಿತೊಎಂತು ಈಭವದಾಂಟುವಂಥ ಪಥವ ಕಾಣೆಕಂತÀುಪಿತನಪಾದಚಿಂತನೆ ಕೊಡಿಸಯ್ಯ3

ವಾನರನಿಕರದೊಳು ಶ್ರೇಷ್ಠನ ಪ್ರಭುವಾರಿಧಿಯನು ಬಂಧಿಸೆಆದಿಮೂರುತಿ ನಿನ್ನ ಆರಾಧಿಸಿದನೆಂಬಸೋಜಿಗಸುದ್ದಿಯು ಮೂರ್ಜಗದೊಳಗುಂಟು4

ಕಮಲನಾಭವಿಠ್ಠಲ ಭಕ್ತರ ಹೃದಯಕಮಲದೊಳಗೆ ಶೋಭಿಪಮಿನುಗುವ ಮಧ್ವಮಂಟಪದೊಳು ರಾಜಿಪಸನಕಾದಿವಂದ್ಯನ ಕ್ಷಣ ಬಿಡದಲೆ ತೋರು 5
*******