ಕೃತಿ ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆ ನಾನೊಂದು ಸುವಸ್ತ
ಮಂಡಲದೊಳು ಸದ್ಗುರು ದಯದಲಿ ಸಾಭ್ಯಸ್ತ ಧ್ರುವ
ನೆನವಿನ ಕೊನೆಯಲಿ ಅನುವಾಗಿ ದೋರತದೆ
ಘನ ದೀಪ್ತಿಯಲಿ ಬೀರುತಿದೆ ಮನದ ಮುಗುಟ 1
ಪ್ರಣವನ ಮೂಲಾಗ್ರಹಲಿ ಪರಿಪೂರ್ಣತಾನಾಗೆÀದ
ಘನವೆ ಘನವಾಗ್ಹೊಳೆಯುತದೆ ಪ್ರಾಣಪದಕ 2
ಮಹಿಪತಿ ಬಾಹ್ಯಾಂತ್ರದೊಳು ವಸ್ತು ವಿರಾಜಿಸುತದೆ
ಮಹಿಮರೆ ಬಲ್ಲರೀಸುಖ ನಾಮಾಮೃತದ ಸ್ವಾನುಭವದ 3
****