Showing posts with label ಜೊ ಜೊ ಜೊ ಜೋ ಶ್ರೀ ರಾಘವೇಂದ್ರ janakiramana. Show all posts
Showing posts with label ಜೊ ಜೊ ಜೊ ಜೋ ಶ್ರೀ ರಾಘವೇಂದ್ರ janakiramana. Show all posts

Monday, 6 September 2021

ಜೊ ಜೊ ಜೊ ಜೋ ಶ್ರೀ ರಾಘವೇಂದ್ರ ankita janakiramana

ankita janakiramana

ರಾಗ: ಕಮಾಚ್  ತಾಳ: ಅಟ


ಜೊ ಜೊ ಜೊ ಜೋ ಶ್ರೀ ರಾಘವೇಂದ್ರ

ಜೊ ಜೊ ಜೊ ಜೋ ಕರುಣಾಸಾಂದ್ರ

ಜೊ ಜೊ ಜೊ ಜೋ ಗುರುಕುಲಚಂದ್ರ

ಜೊ ಜೊ ಜೊ ಜೋ ಪರಮಯೋಗೀಂದ್ರ 


ಕೃತಯುಗದಿ ಅಸುರನ ಉದರದೊಳ್ಜನಿಸಿ

ಕರ್ತೃ ಶ್ರೀಹರಿಯೆಂದು ಜನಕಗೆ ತಿಳಿಸಿ

ಪ್ರೀತಿಯಿಂದಲಿ ಹರಿಯ ಕಂಭದಿ ತೋರಿಸಿ

ಸ್ತೋತ್ರವಮಾಡಿದ ಪ್ರಹ್ಲಾದರಿಗೆ  1

ತ್ರೇತೆದ್ವಾಪರದಲ್ಲಿ ವಸುಧೆಯೋಳ್ಜನಿಸಿ

ಉತ್ತಮರೆಂತೆಂಬೊ ಖ್ಯಾತಿಯಗಳಿಸಿ

ಕಂತುಪಿತ ರಾಮಕೃಷ್ಣರ ಭಜಿಸಿ

ಚತುರ್ವಿಧಪುರುಷಾರ್ಥಗಳ ಗಳಿಸಿ   2

ಕ್ಷಿತಿಯೊಳು ಭಕುತರ ಪೊರೆಯಲವತರಿಸಿ

ಪತಿತಪಾವನರೆಂಬೊ ಬಿರುದನು ವಹಿಸಿ

ಸತತ ಜಾನಕಿರಮಣ ರಾಮರ ಸ್ಮರಿಸಿ

ನಿದ್ರಿಸು ಸುಖವಾಗಿ ಬೃಂದಾವನದಿ  3

***