by ಗೋವಿಂದದಾಸ
ಕೃಷ್ಣನ ನೆನೆವನೆ ಅಜ್ಞಾನಿ | ಸ್ವಾಮಿ |ಕೃಷ್ಣನ ಮರೆವನೆ ಸುಜ್ಞಾನೀ ಪ
ಕೃಷ್ಣನಅನುದಿನಸ್ಮರಣೆಗೈವನೆ | ದುಷ್ಟ |ಕೃಷ್ಣನ ಪರಿಪರಿ ಜರೆವನೆ ಶ್ರೇಷ್ಠ ಅ.ಪ
ಕೃಷ್ಣನ ಸ್ಮರಿಸೀಗ ಬದುಕಿದರುಂಟೇ |ಕೃಷ್ಣನ ನಂಬೀಗ ಜನಿಸಿದರುಂಟೇ ||ಕೃಷ್ಣ ಸೇವೆಯನಿತ್ಯಮಾಡುವನೆ ತುಂಟ |ಕೃಷ್ಣನಾಜೆÕಗೆ ತಪ್ಪಿ ನಡೆವನೆ ಬಂಟ 1
ದುರುಳರ ಕಂಡು ತಾ ಪೊರೆವನೆ | ಕೃಷ್ಣ |ಶರಣರ ನೋಡೀಗ ಮುರಿವನೇ ಕೃಷ್ಣ ||ಮೊರೆಯಿಟ್ಟು ಕರೆದರೆ ಬಾರನೆ ಕೃಷ್ಣ |ಕರುಣದಿ ಇಷ್ಟಾರ್ಥ ಕೊಡನೇ ಶ್ರೀಕೃಷ್ಣ 2
ಧನ್ಯನೆ ಕೃಷ್ಣನ ನೆನೆವನೆ ಪಾಪಿ |ಮೌನದಿ ಕೃಷ್ಣ ಎಂಬನೇ ಮೂಗ ಕೋಪಿ ||ಮಾನ್ಯನೇ ಕೃಷ್ಣನ ನೋಡದ ಕುರೂಪಿ |ಮುನ್ನ ಗೋವಿಂದದಾಸರಿಗೆಲ್ಲ ಗೋಪಿ 3
*******