Showing posts with label ಎಂಥಾ ಗಾಡಿಗಾರನೇ ಕೃಷ್ಣಯ್ಯ purandara vittala. Show all posts
Showing posts with label ಎಂಥಾ ಗಾಡಿಗಾರನೇ ಕೃಷ್ಣಯ್ಯ purandara vittala. Show all posts

Wednesday 4 December 2019

ಎಂಥಾ ಗಾಡಿಗಾರನೇ ಕೃಷ್ಣಯ್ಯ purandara vittala

ರಾಗ ಕೇದಾರಗೌಳ. ಅಟ ತಾಳ

ಎಂಥಾ ಗಾಡಿಗಾರನೇ , ಕೃಷ್ಣಯ್ಯ ಇ-
ನ್ನೆಂಥಾ ಗಾಡಿಗಾರನೇ
ಕಂತುಪಿತನು ವೇಲಾಪುರದ ಚೆನ್ನಿಗರಾಯ
ಎಂಥಾ ಗಾಡಿಗಾರನೇ

ಹಿಂಡು ಕೂಡಿರುವ ಮಕ್ಕಳನೆಲ್ಲ ಬಡಿವರೆ , ಲಂಡನೇನೇ ಅಮ್ಮ
ಉಂಡು ಹಾಲು ಬೆಣ್ಣೆ ಬೆಕ್ಕಿಗಿಕ್ಕುವರೆ ಪ್ರಚಂಡನೇನೇ

ಹೆಚ್ಚು ಹೇಳುವುದೇನು ಬಿಚ್ಚಿ ಉರವನ್ನು ತೋರುವಾನೆ ,ಅಮ್ಮ
ಮುಚ್ಚು ಮರೆ ಯಾತಕೆ ಮನೆಮನೆಯಲಿ ಪೋಗುವಾನೆ

ವಸುಧೆಯೊಳಗೆ ನಂದ ಗೋಕುಲದೊಳಗೆ ತಾ ಬಂದ ಕಾಣೆ, ಅಮ್ಮ
ಹಸುಮಗನಾದ ಪುರಂದರ ವಿಠಲರಾಯ ಕಾಣೆ
***

pallavi

enthA gADigAranE krSNayya innenthA gADigAranE

anupallavi

kandu pitanu vElApurada cennigarAya enthA gADigAranE

caraNam 1

hiNDu kUDiruva makkaLella paDivare laNDanEnE amma uNDu hAlu beNNe bekkigikkuvare pracaNDanEnE

caraNam 2

heccu hELuvudEnu bicci uravannu tOruvAne amma muccu mare yAtake manemaneyali pOguvAne

caraNam 3

vasudheyoLage nanda gOkuladoLage tA bandakANe amma hasu maganAda purandara viTTalarAya kANe
***