Showing posts with label ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ vaikunta vittala. Show all posts
Showing posts with label ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ vaikunta vittala. Show all posts

Sunday, 1 August 2021

ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ

ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ಪ


ಕರದಲ್ಲಿ ದಂಡ ಕೋಲು ಕಮಂಡಲನೀವ

ಪರಿ ಹೇಗೆ ದಾಸಾನುದಾಸನಲ್ಲ

ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ

ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ 1


ಎನ್ನ ಬಿನ್ನಪವೊಂದುಂಟು ಕೇಳೆಲೊ ಸ್ವಾಮಿ

ನಿನ್ನ ಬಾಲಬ್ರಹ್ಮಚಾರಿಯೆಂದು

ಸನ್ನುತಿಸುತಿದೆ ವೇದ ಶಾಸ್ತ್ರಾಗಮಗಳೆಲ್ಲ

ಇನ್ನದಕುಪಾಯವೇನಯ್ಯ ಚೆನ್ನಿಗರಾಯ 2


ಶೃಂಗಾರಗಳನು ತತ್ವಂಗಳನು ಪೇಳುವಡೆ

ಗುಂಗುರುಹಿನೊಳಲ್ಪ ಮನುಜನಲ್ಲ

ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ

ಭಂಗವೇಕಯ್ಯ ವೈಕುಂಠ ಚೆನ್ನಿಗರಾಯ 3

***