Showing posts with label ಎಂದು ಕಾಂಬೆನು ತಂದೆ ಪಂಢರಿ ankita gurugovinda vittala. Show all posts
Showing posts with label ಎಂದು ಕಾಂಬೆನು ತಂದೆ ಪಂಢರಿ ankita gurugovinda vittala. Show all posts

Saturday, 14 August 2021

ಎಂದು ಕಾಂಬೆನು ತಂದೆ ಪಂಢರಿ ankita gurugovinda vittala

 ರಾಗ - : ತಾಳ - 


ಎಂದು ಕಾಂಬೆನು ತಂದೆ ಪಂಢರಿ ವಿಟ್ಠಲರಾಯನೆ

ಬಂದು ನಿನ್ನಯ ಸುಂದರಾಕೃತಿ ಎಂದು ನೋಡುವೆ ll ಪ ll


ದಾಸ ಜನರಾ ಕ್ಲೇಶ ಹರಿಪಾ ದೋಷ ದೂರಾನೇ

ದೋಷಿ ಎನ್ನನು ಪೋಷಿಸೂವುದು ಸಹಸ್ರನಾಮಾನೇ ll 1 ll


ಶ್ರೇಷ್ಠ ಭಕ್ತನು ಕೊಟ್ಟ ಇಟ್ಟಿಯ ಮೆಟ್ಟಿ ನಿಂತಾನೇ

ಪುಟ್ಟನಾಗುತ ಮೆಟ್ಟಿ ಬಲಿಯನು ಕಷ್ಟ  ಕಳೆದಾನೇ ll 2 ll


ಕಾವ ಕೊಲ್ಲುವ ಬೋವ ಬಂಡಿಗೆ ಯಾವನೀತನೇ

ಓವಿ ಭಜಿಸಲು ಕಾವ ಗುರುಗೋವಿಂದವಿಟ್ಠಲನೇ ll 3 ll

***