CHAITRA SURESH RAO 2020
ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ || ಪಲ್ಲವಿ ||
ಮಾರಜನಕನ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು || ಅನು ಪಲ್ಲವಿ ||
ಬಿಲ್ಲ ಹಬ್ಬಗಳಂತೆ, ಅಲ್ಲಿ ಬೀದಿ ಶೃಂಗಾರವಂತೆ
ಮಲ್ಲರ ಕಾಳಗ ಮದ್ದಾನೆಯಂತೆ
ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ || ೧ ||
ಮಧುರಾಪುರಿಯಂತೆ, ಅಲ್ಲಿ ಮಾವ ಕಂಸನಂತೆ
ಒದಗಿದ ಮದಗಜ ತುರಗ ಸಾಲಿನಲಿ
ಮದಮೋಹನ ಕೃಷ್ಣ ಮಧುರೆಗೆ ತೆರಳಿದ || ೨ ||
ಅತ್ತೆ ಮಾವನ ಬಿಟ್ಟು, ಬಂದೆವು ಹಿತ್ತಲ ಬಾಗಿಲಿಂದ
ಭಕ್ತವತ್ಸಲನ ಬಹು ನಂಬಿದ್ದೆವು
ಉತ್ಸಾಹ ಭಂಗ ಮಾಡಿದನಮ್ಮ || ೩ ||
ರಂಗನ ಸೆರೆ ನಂಬಿ ಬಂದೆವು ಸಂಗ ಸುಖವ ಬಯಸಿ
ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ
ಮಂಗಳಮೂರುತಿ ಮದನಗೋಪಾಲನು || ೪ ||
ಶೇಷಗಿರಿಯ ಮೇಲೆ, ಹರಿ ತಾ ವಾಸವಾಗಿಹ ಕಾಣೆ
ಸಾಸಿರನಾಮದ ಒಡೆಯನೆಂದನಿಸಿದ
ಶ್ರೀಶ ಪುರಂದರವಿಠ್ಠಲರಾಯನ || ೫ ||
****
ರಾಗ ನಾದನಾಮಕ್ರಿಯ/ಆದಿ ತಾಳ (raga, taala may differ in audio)
pallavi
tArammayya yadukula vAridhi candramana
anupallavi
mAra janakana mOhanAngana sEri sukhisalu hAraisi bandevu
caraNam 1
billahabbagaLante alli bIdi shrngAravante mallara
kALaga maddAneyante pullAkSaNu tAnallige teraLida
caraNam 2
mathurApuriyante alli mAva kamsanante odagida madagaja
turaga sAlinali madana mOhana krSNa mathurege teraLida
caraNam 3
atte mAvana biTTu bantevu hittilabAgilinda bhaktavatsalana
bahu nambiddevu utsAha bhanga mADidanamma
caraNam 4
rangana nere nambi bandevu sanga sukhava bayasi bhangisi
nammanu hyAnge pOdanamma mangaLa mUruti madana gOpAlanu
caraNam 5
shESagiriya mEle hari tA vAsavAgiha kANe sAsira nAmada
oDeyanendenisida shrIsha purandara viTTalarAyana
***
[ಶ್ರೀ ಕೃಷ್ಣನು ಗೋಕುಲವನ್ನು ಬಿಟ್ಟು, ಮಥುರೆಗೆ ಹೋದ ಸಂಗತಿ ತಿಳಿದು ಗೋಕುಲದ ಗೋಪಿಯರು ಕೃಷ್ಣನ ವಿರಹದಿಂದ ವ್ಯಾಕುಲಗೊಂಡ ಬಗೆ ಇಲ್ಲಿ ವರ್ಣಿತವಾಗಿದೆ]
ಪುರಂದರ ಸಾಹಿತ್ಯ ದರ್ಶನ - ಭಾಗ ೧
**********
ತಾರಮ್ಮಯ್ಯ ಯದುಕುಲ
ವಾರಿಧಿ ಚಂದ್ರಮನ
ಮಾರಜನಕ ಮೋಹನಾಂಗನ
ಪುರಂದರ ಸಾಹಿತ್ಯ ದರ್ಶನ - ಭಾಗ ೧
**********
ತಾರಮ್ಮಯ್ಯ ಯದುಕುಲ
ವಾರಿಧಿ ಚಂದ್ರಮನ
ಮಾರಜನಕ ಮೋಹನಾಂಗನ
ಸೇರಿ ಸುಖಿಸಲು ಹಾರೈಸಿ ಬಂದೆವು
ಬಿಲ್ಲು ಹಬ್ಬವಂತೆ
ಅಲ್ಲಿ ಬೀದಿ ಶೃಂಗಾರವಂತೆ
ಮಲ್ಲರ ಕಾಳಗ ಮದ್ದಾನೆಯಂತೆ
ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ
ಮಧುರಾ ಪುರಿಯಂತೆ
ಅಲ್ಲಿ ಮಾವ ಕಂಸನಂತೆ
ಒದಗಿದ ಮದಗಜ ತುರಗ ಸಾಲಿನಲ್ಲಿ
ಮದನ ಮೋಹನ ಕೃಷ್ಣ ಮಧುರೆಗೆ ತೆರಳಿದ
ಅತ್ತೆ ಮಾವರ ಬಿಟ್ಟು ಬಂದೆವು
ಹಿತ್ತಲ ಬಾಗಿಲಿಂದ
ಭಕ್ತವತ್ಸಲನ ಬಲು ನಂಬಿದ್ದೆವು
ಉತ್ಸಾಹಭಂಗವ ಮಾಡಿದನಮ್ಮ
ರಂಗನ ನೆರೆನಂಬಿ ಬಂದೆವು
ಸಂಗ ಸುಖವ ಬಯಸಿ
ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ
ಮಂಗಳಮೂರುತಿ ಮದನ ಗೋಪಾಲನು
ಶೇಷಗಿರಿಯ ಮೇಲೆ ಹರಿ ತಾ
ವಾಸವಾಗಿಹ ಕಾಣೆ
ಸಾಸಿರನಾಮದ ಒಡೆಯನೆಂದೆನಿಸಿದ
ಶ್ರೀಶ ಪುರಂದರ ವಿಠ್ಠಲರಾಯನ
***
ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ ಪ
ಮಾರಜನಕನ-ಮೋಹನಾಂಗನ-|ಸೇರಿ ಸುಖಿಸೆ ಹಾರೈಸಿ ಬಂದೆವು ಅ.ಪ
ಬಿಲ್ಲು ಹಬ್ಬಗಳಂತೆ_ಅಲ್ಲಿ ಬೀದಿ ಶೃಂಗಾರವಂತೆ ||ಮಲ್ಲಕಾಳಗೆ ಮದ್ದಾನೆಗಳಂತೆ |ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ 1
ಮಧುರಾಪುರವಂತೆ-ಅಲ್ಲಿ-ಮಾವ ಕಂಸನಂತೆ ||ಒದಗಿದ ಮದಗಜತುರಗಸಾಲಿನಲಿ |ಮದನಮೋಹನ ಕೃಷ್ಣ ಮಧುರೆಗೆ ತೆರಳಿದ 2
ಅತ್ತೆ ಮಾವನ ಬಿಟ್ಟು-ಬಂದೆವು ಹಿತ್ತಲ ಬಾಗಿಲಿಂದ ||ಭಕ್ತವತ್ಸಲನ ಬಹು ನಂಬಿದ್ದೆವು |ಉತ್ಸಾಹ ಭಂಗವ ಮಾಡಿದನಮ್ಮ 3
ರಂಗನ ನೆರೆನಂಬಿ-ಬಂದೆವು-ಸಂಗ ಸುಖವ ಬಯಸಿ ||ಭಂಗಿಸಿ ನಮ್ಮನು ಹಾಗೆ ಪೋದನಮ್ಮ |ಮಂಗಳ ಮೂರುತಿಮದನಗೋಪಾಲನು4
ಶೇಷಗಿರಿಯ ಮೇಲೆ-ಹರಿ ತಾ-ವಾಸವಾಗಿಹ ಕಾಣೆ ||ಸಾಸಿರನಾಮದ ಒಡೆಯನೆಂದೆನಿಸಿದ |ಶ್ರೀ ಪುರಂದರವಿಠಲರಾಯನ 5
*********