RAO COLLECTIONS SONGS refer remember refresh render DEVARANAMA
..
ಪರಿಪಾಲಿಸು ದಯದಿ ನಿರುತ ದಾಸಪುರಂದರ ಗುರುವೆ
ಧರ್ಮಪಥವನು ತೋರಿ ಉದಾರಿ ಪ
ಸುರಮೌನಿಯೆ ಮುದದಿ ಹರಿನಾಮವಾ ಘನ ಬೀರುತಾ
ನಿರಯಾ ಪಾತ್ರರ ಸಲಹಿದಿನೀ 1
ಬಾಣಾಲಕ್ಷಕೆ ಪಾದನ್ಯೂನ ಕವನ ನೀ ವಿರಚಿಸುತಾ
ವನಜನಾಭನ ಸ್ತಪಿಸಿದ ನೀ 2
ಶಿರಿಶಾಮಸುಂದರನಾ ಚರಣಾಬ್ಜಕಾರಡಿಯಂದದಿ
ಚರಿಪ ಜ್ಞಾನಿಯೆ ನಮಿಸುವೆನು 3
***