..
kruti: tandevaradagopala vittala (ಪ್ರಹ್ಲಾದಗೌಡರು)
ಶ್ರೀ ಸತ್ಯಬೋಧರು
ಕುರುಡನಿಗೆ ಕರವಿತ್ತು ಕೈಪಿಡಿದು ಕಾಯೋ ಪ
ದೃಢಮತಿಯಿತ್ತು ತವ ಪಾದದಲಿ ಅ.ಪ.
ಗರುಡಾರಿ ಭೂಷಣನ ಚರಣದಡಿಯೊಳಗಿದ್ದು ಘನ ತಪವ ಗೈವ ಮಹತ ಪರಿಯೊ 1
ಬೋಧತೀರ್ಥಾರ್ಯರ ಮತಕನುಸರಿಸಿಸದ್ಭಕುತ ಜನಕೆ ಭೇದಗಳ ಬೋಧಿಸುತ ಸತ್ಯಬೋಧಾಖ್ಯಯದೀ ಧರೆಯೊಳಗಮರವೇ 2
ಮ್ಲೇಚಪುರದಲಿ ಕುಳಿತು ಸಂಚಿತಾಗಾಮಿಗಳ ಕೊಂಚಮಾಡುತ ನಿಷ್ಕೆಂಚಿನರ ಪ್ರೀಯಾತಂದೆವರದಗೋಪಾಲವಿಠಲನ ಮಂಚ ಪದನಿಂದ ಪೋಷಿತನಾದ ಪ್ರಭುವೇ 3
***