ಪುರಂದರದಾಸರು
ದೇವ ದೇವೇಶ ಶ್ರೀ ಹರಿಯಲ್ಲದೆ ಪ.
ಆವ ತಂದೆಯು ಸಲಹಿದನು ಪ್ರಹ್ಲಾದನಆವ ತಾಯಿ ಸಲಹಿದಳು ಧ್ರುವರಾಯನಆವ ಸುತ ಸಲಹಿದನು ಆ ಉಗ್ರಸೇನನಜೀವರಿಗೆ ಪೋಷಕನು ಹರಿಯಲ್ಲದೆ 1
ಆವ ಬಂಧುವು ಸಲಹಿದನು ಗಜರಾಜನನುಆವಪತಿ ಕಾಯ್ದ ದ್ರೌಪದಿಯಮಾನ ||ಆವ ಸೋದರರು ಸಲುಹಿದರು ವಿಭೀಷಣನಜೀವರಿಗೆ ದಾತೃ ಶ್ರೀ ಹರಿಯಲ್ಲದೆ 2
ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆಆವ ರಕ್ಷಕ ಪಕ್ಷಿಜಾತಿಗಳಿಗೆಆವ ಪೊಷಕನು ಗರ್ಭದಲ್ಲಿದ್ದ ಶಿಶುಗಳಿಗೆದೇವ ಶ್ರೀ ಪುರಂದರವಿಠಲನಲ್ಲದಲೆ 3
*******