Showing posts with label ರಾಮ ರಾಮಾಯೆಂದು ಮಾರುತಿಯು pranesha vittala. Show all posts

Saturday, 16 November 2019

ರಾಮ ರಾಮಾಯೆಂದು ಮಾರುತಿಯು ankita pranesha vittala

by ಪ್ರಾಣೇಶದಾಸರು
ರಾಮ ರಾಮಾಯೆಂದು ಮಾರುತಿಯು ನಡೆದು |ಸೋಮವದನೆ ಜಾನಕಿಯನು ಹುಡುಕಾ ಪ

ಹರಿಯಿಂದ ಗುರುತು ಪಡೆದು ತನ್ನ ಶಿಖದಲಿ |ಧರಿಸಿಕೊಂಡತಿಶಯ ಭಕುತಿಯಲಿ ||ತೆರಳಿ ಮುಂದು ಮುಂದಕೆ ಕಡಲ ಸಮೀಪದಿ ವಾ- |ನರಾಧೀಶ ಮಾಡಿದ ವಾಸವನೂ1

ರವಿಜನ ಭಯದಿಂದ ಕಪಿಗಳೆ- |ಲ್ಲವು ಎದೆಯನೊಡೆದು ನಗದೊಳು ಕುಳಿತಿರಲು ||ಪವನಜನು ಬಂದು ವಿಚಾರವ ಮಾಡಲು ಸಾಗ- |ರವ ದಾಟಲೊಬ್ಬಗೊಶವಲ್ಲವೆಂದರೆಲ್ಲರಲ್ಲಿ 2

ನಮ್ಮನು ರಕ್ಷಿಸೋ ಕುಲಮಣಿಯೆ ವಾಸುದೇವನ |ಮೊಮ್ಮಗನೆ ಎಂದು ಕಪಿಗಳು ಯಾಚಿಸೆ ||ಗಮ್ಮನೆ ಹಾರಿ ರಕ್ಕಸಿ ಹೊಟ್ಟೆಯ ಹೊಕ್ಕು ದಾಟಿ ಮತ್ತೇ |ಒಮ್ಮೆ ಒಬ್ಬಳನ್ನು ಸೀಳಿ ಪುರಪ್ರವೇಶ ಮಾಡಿದ3

ಗಿಡಗಿಡ ಚರಿಸುತ ಸ್ಥಳ ಸ್ಥಳದಲಿ ಬಲು |ಹುಡುಕುತ ಮೂಜಗ ಪೂಜಿತನ ||ಮಡದಿಯಾಕೃತಿಯನು ಕಾಣಲಾಕ್ಷಣದೊಳು |ತಡೆದನಲ್ಲಿಯೇ ಪದಗಳ ಮುಂದಕ್ಕಿಡದಲೇ4

ಋಷಿಗಳಂದದಿ ಪ್ರಾಣೇಶ ವಿಠಲನೆನುತಿರೆ |ಶಶಿಮುಖಿಯಳು ಆಂಜನೇಯ ಪದ |ಬಿಸಜಾಂಘ್ರಿಗಳಿಗೆರಗಿ ಜಯ ಜಯವೆಂದು |ಉಸಿರಿದ ರಘುಪತಿಯ ಸುದ್ದಿ ವಿಸ್ತರದಲಿ 5
*******