Showing posts with label ಕರುಣಿಸು ವರಗೌರಿ ಭರದಿಂದ ವರವನ್ನೂ others. Show all posts
Showing posts with label ಕರುಣಿಸು ವರಗೌರಿ ಭರದಿಂದ ವರವನ್ನೂ others. Show all posts

Friday, 27 December 2019

ಕರುಣಿಸು ವರಗೌರಿ ಭರದಿಂದ ವರವನ್ನೂ others

ಕರುಣಿಸು ವರಗೌರಿ ಭರದಿಂದ ವರವನ್ನೂ
ಶರಣಾಪ್ತ ಬೇಡುವೆ ನಿನ್ನಾ ||

ಪಾರ್ವತೀ ತಾಯೇ ಪಾಮರರಿಗೆ ಪರಮಪಾವನ್ನೆ
ಪರಿಪಾಲಿಸುತ್ತ ವರವಿತ್ತು ನೀ ಕಾಪಾಡೆ ||1||

ಪತಿಪಾದ ಸೇವಾ ಸತತದೊಳಿತ್ತು ಸತಿಗೆ ಮಾಗಲ್ಯ
ನಿರತವೀಯೆ ತಾಯೆ ಸಕಲಕೆ ಶ್ರೀ ಗೌರಿ||2||

ಪಾದ ಸೋಸಿಲಿ ಭಜಿಪೆ
ವರವೀಯೆ ತಾಯೆ ಶಂಕರಿ ಕಾಯೆ ದೇಹಿಮೆ ||3||
********