..
kruti by ಮಹಾನಿಧಿವಿಠಲರು mahanidhi vittalaru
ದಯದಿಂದಲಿ ನೋಡೊ ಎನ್ನಾ
ಹಯವದನ್ನಾ ಶ್ರೀಹರಿ ಪ
ಬೇಡಿಕೊಂಬೆನೋ ನಿನ್ನಾ ಆನಂದ ಘನ್ನಾ
ವರಗಳ ನೀಡಿ ಅ.ಪ.
ಭಕುತದಿ ಕೂಡಿ ಆಡುವೆ ನೀ ನಿತ್ಯ
ಸುಜನರಿಗೆ ಕಾಡಿ ಕೆಣಕುವ ಈ ಖೋಡಿ
ದುರಿತಂಗಳ ಓಡಿಸಿ ಅನುದಿನ ಸಾಮಗಾನ ಪ್ರೇಮಾ
ಬ್ರಹ್ಮಾದಿಗಳಿಗೆ ಕಾಮಿತಪ್ರದ ರಾಮಾ
ಜಯಜನರುಜಾಪತಿ ಭೂಮಾ ದೈತ್ಯವಿರಾಮಾ
ಪರಿಪೂರ್ಣ ರಾಮಾ 1
ಶಾಮಸುಂದರ ಶಕಟಾಸುರಮರ್ದನ
ಸಾಮಜವರದನೆ ಮಾತುಳಾಂತಕ
ಮಾಮನೋಹರ ಮದನ ಜ£ಕÀನೆ ಕರುಣಿಸಿ ಎನ್ನನು 2
ಏನು ಬಲ್ಲೆನು ನಾನು ನಿನ್ನ ಮಹಿಮೆಯನ್ನು
ದೀನ ಸುರಧೇನು ಬಣ್ಣಿಸಲಳವೆ ನಿನ್ನ ಮಹತ್ತನ್ನು
ಮುನಿಮೌನಿವರರಿಂದ ಅನಘನೆನಿನ್ನಮಿತ ಗುಣಗಣನ ಕಾಣದೆ
ಲಕುಮಿ ಮನದಲ್ಲಿ ಅನುವು ತಪ್ಪೆ
ದಿವಿಜ ಮನುಜ ಲತೆಗಳೆಲ್ಲಾ ನಮೋ ನಮೋ
ಎಂಬೋರಲ್ಲದೆ ಸ್ವಾಮಿ ನಿತ್ಯ 3
ಹಾಟಕಾಂಬರಧರ ಶ್ರೀವತ್ಸಲಾಂಛನ
ಜಟಾಮಕುಟ ಕುಂqಲ ಕೈಟಭಾಂತಕನೆ
ಕಡಲಮಂದಿರ ಕುಟಿಲ ಕಟುಮತಿ
ಖಳರನು ಶಿಕ್ಷಿಸಿ ಕೈಯ್ಯ ಬಿಡದೆ ಎನ್ನಾ
ಮಾನಿಧಿವಿಠಲ ಕಾಲಿಗೆ ಬೀಳುವೆ 4
***