..
ಯಾಕೆ ಬೃಂದಾವನ ಯಾಕೆ ಗೋಕುಲ ನಮಗೆಯಾಕೆ ಬಂದೆಯೊ ಉದ್ಧವ ಪ
ಯಾಕೆ ಸ್ನೇಹದ ಮಾತು ಲೋಕಮೋಹಕ ತಾನುಆ ಕುಬ್ಜೆಯನು ಕೂಡಿದ ಉದ್ಧವ ಅ
ಬಿಲ್ಲುಗಾರನೈಯನ ಬ್ಯಾಟೆನಗೆ ನಡೆ ನೋಟಇಲ್ಲದಂತಾಯಿತಲ್ಲತಲ್ಲಣಿಸುತ್ತಿದೆ ತಾಪ ಮೈಯೊಳು ಹೆಚ್ಚಿಪರವಶವಾಯಿತಲ್ಲಎಲ್ಲರನಗಲಿಸಿದ ಖುಲ್ಲ ಅಕ್ರೂರ ನಮ್ಮವಲ್ಲಭನ ಕರೆದೊಯ್ದನೊಮಲ್ಲರ ಮರ್ದಿಸಿದ ಮಾವ ಕಂಸನ ಕೊಂದವಲ್ಲಭನ ತೋರಿಸೈಯ, ಉದ್ಧವ 1
ಅನುದಿನವಾದರಸಿ ಅಧರಾಮೃತವನಿತ್ತುಆನಂದವನು ತೋರುವಮನದ ಮರ್ಮವ ತಿಳಿದು ಮನಸಿಜನೈಯನುಮಧುರ ಮಾತಿಲಿ ದಣಿಸುವಕನಸಿನೊಳು ಕಂಡ ತೆರನಾಯಿತು ನೋಡುಮುನಿವಂದ್ಯ ತಾನೆ ಬಲ್ಲವನಜಾಕ್ಷ ವಾಸುದೇವನ ತಂದು ತೋರಿಸಿಒಡಗೂಡಿಸೈಯ ನೀನೆ ಉದ್ಧವ 2
ಕರುಣಾಬ್ಧಿಯೆಂಬರಾ ಕಪಟನಾಟಕದವನಸರಸ ವಿರಸ ಮಾಡಿದಸ್ಮರಿಸಿದವರ ಕಾಯ್ವ ಶರಣಜನ ಪಾಲಕಮರೆತನೇತಕೊ ಎಮ್ಮನುತ್ವರಿತದಿಂದಲಿ ಪೋಗಿ ತರುಣೇರ ಗೋಳ್ಹೇಳಿಬರಮಾಡಬೇಕೆಂಬೆವೊನೆರೆ ನಂಬಿದವರನ್ನು ಪೊರೆವ ಶ್ರೀಕೃಷ್ಣಗೀಪರಿಯೆಲ್ಲ ಪೇಳಿ ಬಾರೊ ಉದ್ಧವ 3
***