..
kruti by rukmangadaru
ಜಯಮಂಗಳಂ ಮಹಾ ಶುಭ ಮಂಗಲಂ |ಮಂಜುಕರ ಲಾಲಿತ ಕುರಂಗಗೆ ||ಮಂಗಲ ಮೌನಿ ಮಾನಸ ಸಂಗಗೆ |ಮಂಗಲಂ ಮಂದಿರೀಕೃತ ಶೈಲಶೃಂಗಗೆಮಂಗಲಂ ಮಲ್ಲಿಕಾರ್ಜುನ ಲಿಂಗಗೆ ಪ
ಗರುಡಧ್ವಜಪ್ರಿಯಗೆ ಗಜಕೃತ್ತಿ ವಸನಗೆ |ಗಂಗಾ ತರಂಗ ಚಾರು ಕಪರ್ದಿಗೆ ಗುಹ ಗಣಾಧಿಪ ಗುರುಗೆ | ಗೋರಾಜ ವಾಹನಗೆ |ಗಿರಿಜಾಂತರಂಗ ವಾರಿಜಭೃಂಗಗೆ 1
ಕರ್ಪೂರ ಗೌರಗೆ ಕಲ್ಪಾಂತವೀರಗೆ | ಕಾಲಾಗ್ನಿ ಕಿಲಕಾಲಿತ ಮಾರಗೆ |ಕಾಕೋಲ ಕಂಧರಗೆ ಕಾಶೀ ವಿಹಾರಗೆ |ಕಾಕೋದರಾಭರಣ ಕಮನೀಯಗೆ 2
ವಿಧು ಶಕಲಾಧಾರಿಗೆ ವಿಶ್ವಹಿತಕಾರಿಗೆ ವಿಯದಟನ ವಿಕಟ ಪುರ ಸಂಹಾರಿಗೆ | ವಿಮಲ ವಿದ್ಯಾನಿಧಿಗೆ |ವಿಧಿವಂದ್ಯ ರುಕ್ಮ ಪಾಡುಕ ಪಾದಗೆ 3
ಮಂಗಲ ಮಹಿಮನು ಶೃಂಗಾರ ಮಾಧವ |ಮಂಗಳ ಕರತರಂಗನ | ಅರಿತತಿ ಭಂಗವ ಬಿಡಿಸುತಕಂಗಳ ಸದೋದಿತ ರುಕ್ಮ 4
***