ಕಾಖಂಡಕಿ ಶ್ರೀ ಮಹಿಪತಿರಾಯರು
ಸಾರಿ ಚೆಲ್ಯದೆ ನೋಡಿಹಸ್ವರೂಪ ತೋರುವ ಗುರುದೀಪ ಪ
ಒಳಹೊರಗಿದು ಥಳಥಳಿಸುತಲಿಹುದು ಮೊಳೆಮಿಂಚಿನಕಳೆ ಝಳಝಳಿಸುತ ನಿಜ ಹೊಳೆಯುತಿಹುದು ಇಳೆಯೊಳಗಿಂದು ತಾ ಬೆಳಗಿನೊಳಿಹ ಘನ ಬೆಳಗಿನ ಪ್ರಭೆಯು 1
ಅನುದಿನ ನೋಡಿ ತುಂಬಿ ತುಳುಕುವದು ಮುನಿಜನ ನೋಡುವಾನಂದದ ಸುಖವಿದು ಘನಪರಬ್ರಹ್ಮಾನಂದದ ಬೆಳಗು 2
ಕಣ್ಣಿಗೆ ಕಾಣಿಸುತಿಹುದು ನೋಡಿ ಭಿನ್ನವಿಲ್ಲದೆ ಅಣುರೇಣುದೊಳೆಲ್ಲ ಧನ್ಯಗೈಸಿತು ಮಹಿಪತಿ ಜೀವನವಿದು ತನ್ನಿಂದಲಿ ತಾನೆ ತಾನೊಲಿದು 3
***