Showing posts with label ಶ್ರೀಮಾರುತಾತ್ಮ ಸಂಭೂತ ಹನುಮ jagannatha vittala. Show all posts
Showing posts with label ಶ್ರೀಮಾರುತಾತ್ಮ ಸಂಭೂತ ಹನುಮ jagannatha vittala. Show all posts

Saturday, 14 December 2019

ಶ್ರೀಮಾರುತಾತ್ಮ ಸಂಭೂತ ಹನುಮ ankita jagannatha vittala

ಜಗನ್ನಾಥದಾಸರು
ಶ್ರೀ ಮಾರುತಾತ್ಮ ಸಂಭೂತ ಹನುಮ
ಭೀಮ ಮಧ್ವಾಖ್ಯ ಯತಿನಾಥ | ಮೂಲ
ರಾಮಕೃಷ್ಣಾರ್ಪಿತ ಸುಚೇತಾ | ಮಮ
ಸ್ವಾಮಿ ಚಿತ್ತೈಸೆನ್ನ ಮಾತಾ 1

ಅಂಜನಾದೇವಿ ಸುಕುಮಾರ |ಎಮ್ಮ
ನಂಜಿಸುವ ಘೋರ ಸಂಸಾರ |ಹೇ ಪ್ರ
ನಿಗಮ ಸಂಚಾರ | ಕ್ಲೇಶ
ಭಂಜಿಸಿ ಸಲಹೋ ಗುಣೋದಾರ 2

ಕುಂತಿ ಜಠರದಲುದಿಸೆ ಬಂದೆ | ಮಾ
ಹೊಂತ ಕೌರವರ ನೀ ಕೊಂದೆ | ಅನಾ
ದ್ಯಂತ ಕಾಲದಿ ಎಮ್ಮ ತಂದೆ | ನೀನೆ
ಸಂತೈಸಬೇಕೆಂದು ನಿಂದೆ 3

ಮಧ್ಯ ಗೇಹಾಖ್ಯ ದ್ವಿಜಸದನ | ದೊಳಗೆ
ಉದ್ಭವಿಸಿ ಮೆರೆದೆ ಜಿತಮದನ | ಧರ್ಮ
ಪದ್ಧತಿಗಳ ಪ್ರಸನ್ನವದನಾ | ತಿಳಿಸಿ
ಉದ್ಧರಿಸೋ ದನುಜಕುಲ ನಿಧನ4

ಶ್ರೀ ಪೂರ್ಣಬೋಧ ಯತಿರಾಯ | ಎಮ್ಮ
ತಾಪತ್ರಯಗಳಿಂದ ನೋಯ | ಗೊಡದೆ
ನಿಕಾಯ | ಕೃಷ್ಣ
ದ್ವೈಪಾಯನಗೆ ನೀನೆ ಪ್ರೀಯ 5
ಬದರಿಕಾಶ್ರಮಕೆ ನೀ ಪೋಗಿ | ಲಕ್ಷ್ಮೀ
ಹೃದಯ ವಾಸನ ಪದಕೆ ಬಾಗಿ | ಭಾಷ್ಯ
ಮುದದಿಂದ ಪೇಳ್ದೆ ಚೆನ್ನಾಗಿ | ಎನಗೆ
ಅದರ ಭಾವವ ತಿಳಿಸೋ ಯೋಗಿ6

ತಾಪ ಭಾರ
ತೀರಮಣ ಮಹಪಾಪ ವೆಣಿಸಿ
ದೂರ ನೋಳ್ಪರೆ ಸುಪ್ರತಾಪ ಪರಮ
ಕಾರುಣಿಕ ತೋರೋ ತವರೂಪ 7

ಭಕ್ತರಿಗೊಲಿದು ಭವದಿಂದ ನೀ
ಮುಕ್ತರನÀ ಮಾಡು ದಯದಿಂದ ನೀನೆ
ಶಕ್ತನಹುದೆಂದು ವೇದವೃಂದದೊಳಗೆ
ಉಕ್ತವಾಗಿದೆ ನಿಮ್ಮಾನಂದಾ8

ಜೀವಕೋಟಿಯೊಳು ನೀನೆ ಪಿರಿಯ ಎಮ್ಮ
ನೋವು ಸುಖಗಳನು ನೀನೆ ಅರಿಯ ಈಗ
ನೀವೊಲಿಯದಿರೆ ಹರಿ ನಮ್ಮ ಪೊರೆಯಾ ಜಗವ
ಕಾಯ್ವ ಗುರುವರ ನೀನೆ ಖರೆಯ 9

ಶ್ರೀ ಜಗನ್ನಾಥ ವಿಠ್ಠಲಯ್ಯ ನಂಘ್ರಿ
ಪೂಜಿಸುವ ಸಜ್ಜನರ ಕೈಯಾ ಪಿಡಿದು
ನೀ ಜೋಕೆ ಮಾಡುವುದು ಜೀಯಾ ನೀನೆ
ಈ ಜಗತ್ರಯ [ಕೆ] ಗುರುವರ್ಯಾ 10
*********