Showing posts with label ಪರಿಪರಿಯಲಿ ನೀ ಪಾಲಿಸೋ ನರಹರಿಯೆ ನಾನಾಪರಾಧಿ hanumesha vittala. Show all posts
Showing posts with label ಪರಿಪರಿಯಲಿ ನೀ ಪಾಲಿಸೋ ನರಹರಿಯೆ ನಾನಾಪರಾಧಿ hanumesha vittala. Show all posts

Tuesday, 1 June 2021

ಪರಿಪರಿಯಲಿ ನೀ ಪಾಲಿಸೋ ನರಹರಿಯೆ ನಾನಾಪರಾಧಿ ankita hanumesha vittala

 ಪರಿಪರಿಯಲಿ ನೀ ಪಾಲಿಸೋ ನರಹರಿಯೆ ನಾನಾಪರಾಧಿ

ಶ್ರೀ ನರಹರಿಯೇ ನಾನಪರಾಧಿ ಪ

ಸತಿಸುತರು ಹಿತದವರೆಂದರಿತು ನಾ

ಮತಿಯಗೆಟ್ಟು ಕ್ಷಿತಿಪತಿಯೇ ನಿನ್ನನು ಸ್ತುತಿಸದಾ ಅಪರಾಧಿ 1

ಬಂದ ಅತಿಥಿಗಳಿಗೊಂದಿಸದೆ ಪರ ನಿಂದೆಯಲ್ಲಿ ಗೋ-

ವಿಂದ ನಿನ್ನನು ವಂದಿಸದಾ ಅಪರಾಧಿ 2

ತನುಮನಧನ ಕೊಟ್ಟಿರುವ ಶ್ರೀವರ ಹನುಮೇಶ

ವಿಠಲನೆ ನಿನ್ನನು ನೆನೆಯದಾ ಅಪರಾಧಿ 3

****