Showing posts with label ಶರಣು ವಾದಿರಾಜ ಗುರುವೆ ಶರಣು ವಾಜಿವಕ್ತ್ರಪ್ರಿಯನೆ krishnavittala. Show all posts
Showing posts with label ಶರಣು ವಾದಿರಾಜ ಗುರುವೆ ಶರಣು ವಾಜಿವಕ್ತ್ರಪ್ರಿಯನೆ krishnavittala. Show all posts

Monday 2 August 2021

ಶರಣು ವಾದಿರಾಜ ಗುರುವೆ ಶರಣು ವಾಜಿವಕ್ತ್ರಪ್ರಿಯನೆ ankita krishnavittala

ಶರಣು ವಾದಿರಾಜ ಗುರುವೆ ಶರಣು ವಾಜಿವಕ್ತ್ರಪ್ರಿಯನೆ

ಶರಣು ನಂದಮುನಿಯ ಅನುಜ ಶರಣು

ಭಾವಿ ಮುಖ್ಯಪ್ರಾಣನೆ ಪ

ದುರಿತರಾಶಿ ತರಿದು ಎನ್ನ ಭರದಿ ಕರುಣ ತೋರಿ ನಿನ್ನ

ಚರಣಭಕ್ತರಲ್ಲಿ ಮುನ್ನ ಇರಿಸಿ ಸಲಹೊ ಕರುಣಶರಧಿಯೆ ಅ.ಪ.

ಘೋರಕಲಿಯು ಬಂದನೆಂದು ಸಾರಿ

ಹರಿಯಮುಂದೆ ನಿಂದು

ಸೇರಿ ಸ್ತುತಿಸೆ ದಿವಿಜವೃಂದ ಧೀರ ಲಾತವ್ಯ ಬಂದೆ ಹಾ

ಚಾರು ಯುಕ್ತಿಮಲ್ಲಿಕಾದಿ ಸಾರಗ್ರಂಥರಾಶಿ ಇತ್ತು

ಈರಮತವ ಮೆರೆಸಿ ಮೆರೆದ ಶೂರ ನಿನ್ನ ಪೊಗಳಬಲ್ಲೆವೆ 1

ಎರಡು ಹತ್ತು ಮೇಲೆ ನೂರುವರುಷ ಪೊರೆದು ಶಿಷ್ಯಸಂಘ

ತೊರೆಯದೇನೆ ಕಾಯ ಕುಳಿತೆ ಭರದಿ ವೃಂದಾವನದಲೀ

ತೊರೆಯಲಾಗದೇನೆ ನಿನ್ನ ತುರಗವದನ ರಾಮಕೃಷ್ಣ

ಅರವಿದೂರ ವೇದವ್ಯಾಸ ಪೊರೆವರೆಲ್ಲ ಸೇವೆಕೊಳ್ಳುತಾ 2

ಹನುಮ ಭೀಮ ಮಧ್ವಹಾಗೆ ಗಣಪನೈಯ್ಯ ಸುರರು ಎಲ್ಲ

ಮಣಿದು ಕುಣಿದು ನಿನ್ನ ಸಹಿತ ಮಣಿದು ಹರಿಯ ಭಜಿಸುತಿಹರು

ತನುವ ಕೆಡಹಿ ರಾಗದಿಂದ ನೆನೆದು ನಿನ್ನ ನೋಡೆಸದನ

ಜನುಮ ಜನುಮ ದೋಷ ಕಳೆವ ಘನ ಮಹಾತ್ಮೇಗೀಡುಕಾಣೆ 3

ಎರಡು ಕಮ್ಮಿ ಎರಡುನೂರು ವರವಿರಂಚಿ ಕಲ್ಪಗಳಲಿ

ತೊರೆದು ಕಾಮ ಹರಿಯ ಯಜಿಸಿ ಮೆರೆವ

ನಿಮ್ಮ ಮಹಿಮೆಗೇನೆಂಬೆ

ಸುರರು ವಿವಿಧ ಬಲಿಗಳಿತ್ತು ಚರಣ ಪಿಡಿದು ನಡೆವರೆನಲು

ನರನು ಪೊಗಳಬಲ್ಲನೇನು ಹರನಗುರುವೆ ಶಿರವ ಬಾಗುವೆ 4

ವರವಿಮಾನದಲ್ಲಿ ಕುಳಿತು ಚರಿಸುತಿರಲು ಒಮ್ಮೆಯೇನೆ

ಸುರರು ಎಲ್ಲ ಕರೆಯೆನಿನ್ನ ಧರಿಸಿ ರೂಪ ನಿಚಯ ನಡೆದೆಯಾ

ವರವಿಶೇಷಪೂಜೆಕೊಂಡು ಸ್ಥಿರವಗೈದು ಪದವಿಗಳನು

ಕರೆದು ಹರುಷ ದಿವಿಜಗಣಕೆ ಪೊರೆದ ನಿನಗೆ ತುಲ್ಯ ಕಾಣೆವೈ5

ಸಿರಿಯಪತ್ರ ಹರಿಗೆ ಇತ್ತು ಮರುತನಂತೆ ಪಡೆದು ವರವ

ದುರಳ ಚೈವ ಕೊಡಲು ಶಾಪ ಹರುಷದಿಂದ

ಕೊಂಡು ಭುವಿಯಲಿ

ಧರಿಸಿನಿಂದು ದಂಡ ಕಾಷ್ಠ ದುರುಳವಾದಿಗಜಗಳಳಿದು

ಚರಿಸಿ ದೇಶವೆಲ್ಲ ಕೊನೆಗೆ ಕುರುಹು ತೋರಿನಿಂತ ಸ್ವಾದಿಲಿ6

ಏನು ನಿಮ್ಮ ಮಹಿಮೆ ಗುರುವೆ ತಾನೆ ಬಂದು ವಾಜಿವದನ

ಸಾನುರಾಗದಿಂದ ಕೊಂಬ ಹೂರ್ಣಭಕ್ಷ್ಯವೆಲ್ಲ ಪೂರ್ಣ

ಪೂರ್ಣನೀನು ಜೀವಗಣದಿ ಪೂರ್ಣತನ್ನ ಕಂದನೆಂದು

ದಾನಗೈದ ನಿನ್ನ ಸತಿಗೆ e್ಞÁನಪೂರ್ಣಬಲನು ನೀನ ಹೋ 7

ಸೇರಿ ಇಹರು ಬ್ರಹ್ಮವಾಯು ಚಾರು ಭ್ರಾತೃನಿನ್ನ ಬದಿಲಿ

ಮೀರಿ ಇಹುದು ಯಾವುದಿಲ್ಲ ಮೂರುಜಗದಿ ಸತ್ಯಸತ್ಯವೋ

ಮೂರುಕಣ್ಣಿನಾತ ಮುಂದೆ ಭಾರಿಭೂತರಾಜ ನಿಮ್ಮ

ಸಾರ ಚರಣ ಪಿಡಿದು ಭಜಿಪ ಯಾರು ಸಾಟಿ ಇಲ್ಲ ಸಾರುವೆ8

ಗಂಗೆಮೊದಲು ಎಲ್ಲ ತೀರ್ಥ ತಂಗಿ ಧವಳಗಂಗೆಯಲ್ಲಿ

ತುಂಗ ಮಹಿಮ ನಿನ್ನ ಯಜಿಸಿ ಹಿಂಗಿಸುವರು ತಮ್ಮ ಶಮಲ

ಕಂಗಳಿಂದ ನೋಡೆ ಕೇಳೆ ಭಂಗ ಸತ್ಯಸರ್ವಪಾಪ

ಅಂಗವದ್ದಿ ಭಜಿಪ ನರಗೆ ರಂಗ ಒಲಿವ ಸುರರು ಕೈವಶ 9

ನಿನ್ನ ನಿಲಯ ಸುತ್ತ ನೃತ್ಯ ವನ್ನು ಗೈದು ಭಜಿಸೆ ಹರಿಯ

ಘನ್ನ e್ಞÁನ ಚೆನ್ನ ಪಡೆದು ಸನ್ನು ತಾಂಗ ನೆಡೆಯಕಾಣುವ

ಅನ್ನಸತ್ರ ನಿನ್ನ ಕ್ಷೇತ್ರ ಅನ್ನಪತಿಯ ತೋರ್ಪನಿನಗೆ

ಇನ್ನು ಸರಿಯೆ ಕಾಮಧೇನು ಚಿಣ್ಣನೆಂದು ಪಿಡಿಯೊ ಶರಣನ 10

ಹತ್ತು ಐದು ನಾಲ್ಕು ಆರು ಹತ್ತು ಐದು ಸಹಿತ ಒಂದು

ಹತ್ತು ಹತ್ತು ಮತ್ತೆ ಒಂದು ಹತ್ತುನೂರು ಹಾಗನಂತ

ಸುತ್ತ ಪಂಚನಿಲಯಗಳಲಿ ನಿತ್ಯ ಧೊರೆಯ ರೂಪಗಳನು

ನಿತ್ಯನುತಿಪೆ ಬೃಹತಿಯಿಂದ ಸತ್ಯಪದವಿಸಿದ್ಧ ನಿನಗೆಲೈ 11

ಗಿರಿಗಳರಸು ಮಗಳ ಸಹಿತ ಕರೆದು ನಿಮ್ಮ ರತ್ನರಾಶಿ

ಸುರಿದು ಶಿರದಿ ಪೂಜೆಗೈದು ಪರಮ ಧನ್ಯನಾದ ತಾನಹೋ

ತರಣಿ ಜನರು ಮಾರ್ಜನಾದಿ ಪರವಿಶೇಷ ಸೇವೆಗೈದು

ಹರುಷದಿಂದ ಹಾಡಿ ನಮಿಸೆ ದೊರೆಯ

ಕೊಡುವೆ ಕಾಮಿತಾರ್ಥವ 12

ದೀಪಸಾಲು ಹಚ್ಚಿ ಭಜಿಸೆ ಪೋಪುದೈಯ್ಯ ಭವದ ತಾಪ

ಆ ಪರೇಶ ಒಲಿದು e್ಞÁನ ದೀಪ ವಿಡುವ ಹೃದಯಕಮಲದಿ

ಕೋಪ ತಾಪ ದೂರನಾಗಿ ಶ್ರೀಪತಿಯ ದಾಸನಾಗಿ

ಲೇಪ ರಹಿತನಾಗಿ ಭವದ ಕೂಪ ದಾಟ ಪೋಪ ಬೇಗಹೋ13

ಯಮನ ಪುರವ ಸಾರಿ ನೀನು ವಿಮಲರೂಪ ತೋರಿ ಹಾಗೆ

ಅಮರ e್ಞÁನ ಬೋಧೆಯಿತ್ತು ಯಮನ ರಾಜ್ಯ ಬರಿದುಗೈದೆಹೊ

ಕಮಲೆಕಂದ ಕಾಮಕೊರಗಿ ನಮಿಪ ನಿನ್ನ ರೂಪ ನೋಡಿ

ಶ್ರಮವು ಆಯ್ತುಕಾಮನಿಂದ ಅಮರಸ್ತ್ರೀವೃಂದಕ್ಕೆಲ್ಲ ವೈ14

ದುಃಖಕೊಡದ ನಿನ್ನ ಅಸ್ಥಿ ಶಂಖಚಕ್ರ ಮಯವು ಹೌದು

ಪಂಕಜಾಕ್ಷ ಅಂಗದಲ್ಲೆ ಅಂಕೆರಹಿತ ಸುಖವು ನುಂಬೆಹೊ

ಟೊಂಕದಿರುವ ಸೂತ್ರ ತಾನು ಕಿಂಕಿಣೀ ಸುರಾವದಿಂದ

ಶಂಕೆ ಕೊಡದೆ ಸಾರುತಿಹನು ಬಿಂಕವಾಗಿ ಪದವಿಬರ್ಪುದ15

ಮೇರುಗಿರಿಯ ಶಿಖರದಲ್ಲಿ ಕ್ರೂರಮದನ ತಾಪದಿಂದ

ಚಾರುಕನ್ಯೆಯೊಬ್ಬಳಿನ್ನು ತೋರೆ ಸ್ವಾಂಗ ನಿನ್ನ ಬಯಸುತ

ಧೀರನೀನು ಕದಲದಿರಲು ಕ್ರೂರ ತಪದಿ ಹರಿಯ ಒಲಿಸಿ

ನೀರೆ ಪಡೆದ ಲೈಯ ನಿನ್ನ ಸೇರಿ ಸುಖಿಪ ಭಾಗ್ಯಮುಂದಕೆ 16

ಗರುಡನೇರಿ ನಿನ್ನ ಸಹಿತ ಹರಿಯು ತೋರಿಸಕಲಲೋಕ

ತರಿಸಿ ಅಮೃತ ಕರದಿ ಕುಡಿಸಿ ಅರವಿ ದೂರ ನಿನ್ನ ತಬ್ಬಿದ

ಮರುತನಂತೆ ವ್ಯಾಜರಹಿತ ಚರಣಭಜರ ನಿನಗೆ ತಾನೆ

ಕರೆದು ಕೊಟ್ಟ ವಾಯುಪದವಿ ತುರಗವದನ ಪ್ರಥಮ ಭಕ್ತಹೋ17

ಗೆದ್ದು ವೀರಶೈವಗುರುವ ಗದ್ದುಗೆಯನು ಏರಿ ಮೆರೆದೆ

ಮೆದ್ದು ಗರವ ಸುಖದಿ ನಿಂದೆ ತಿದ್ದಪಾಟು ತೋರ್ದೆ ಉಡುಪಿಲಿ

ಬದ್ಧನಾದ ವಿಠಲ ನಿನಗೆ ಬಿದ್ದ ನೃಪನ ಗೇಸಿ ಕಾಯ್ದೆ

ಶುದ್ಧ ವಿಷ್ಣುಭಕಿÀ್ತ ತೋರಿ ಮಧ್ವಸುತರ ಪೊರೆದ ದಾನಿಹೋ 18

ನೂರುನೂರು ಆನೆಮೀರಿ ಭಾರಿಬಲದ ಮೆರೆವ ಶಕ್ತ

ನೇರನಿಲಿಸಿ ಧ್ವಜದಸ್ತಂಭ ದೂರಗೈದೆ ಶಿಷ್ಯಕಳವಳ

ಭಾರ ಹೌರ ಸ್ಥೂಲಸೂಕ್ಷ್ಮ ತೋರಬಲ್ಲೆ ಇಚ್ಛೆಯಂತೆ

ಮೇರೆ ಇರದ ಮಹಿಮನೆಂದು ಸಾರಿಸಾರಿ ನುತಿಪೆ ಜೀಯನೆ 19

ಗಂಗೆಪಡೆದ ರಂಗನನ್ನು ಅಂಗನಿಂದ ತರಿಸಿ ನೆಟ್ಟು

ತುಂಗವಿಭವದಿಂದ ಯಜಿಸಿ ಕಂಗಳಿಂದ ನೋಡಿ ಉತ್ಸವ

ಅಂಗಮರೆತು ನಂದ ಕುಡಿದೆ ಸಂಗದಿಂದ ಕಂಡ ಜನಕೆ

ಭಂಗವಾಯ್ತು ಸಕಲ ಬಂಧ ಕೊಂಗಿ ಖಳರ ಬಿಟ್ಟು ಸತ್ಯವೈ 20

ಬರಿಯ ಕವನವಲ್ಲ ಕೇಳಿ, ಗುರುವೆ ದ್ವಿಜನ ಸ್ವಪ್ನದಲ್ಲಿ

ಅರುಹಿ ತನ್ನ ಚರಿತೆಯನ್ನು ಬರೆಸಿ ಇಹನು ಪೊರೆಯೆ ಶಿಷ್ಯರ

ಅರಸಿ ನೋಡಿ ಧನ್ಯರಾಗಿ ಒರೆಸಿ ಕಾಮಕ್ರೋಧವೆಲ್ಲ

ಚರಣಪಿಡಿಯೆ ಭಕ್ತಿಯಿಂದ ಗುರುವು ಬಿಡನು ನಿಮ್ಮನೆಂದಿಗು 21

ಸುಧೆಯ ಕರ್ತ ಜಯಮುನೀಂದ್ರ ಹೃದಯವಾಸಿ ವಾಯುವಂದ್ಯ

ಪದುಮೆ ರಮಣ ಕೃಷ್ಣವಿಠಲ ಸದರದಿಂದ ಮುಕ್ತಿ ನೀಡುವ

ಮುದದಿ ವಾದಿರಾಜ ಹೃದಯ ಸದನ ವಾಜಿವಕ್ತ್ರಗೆರಗಿ

ಬದರಿನಿಲಯ ನನ್ನ ನೆನೆದು ಪದವನಿದನು ಪಠಿಪ ಭಕ್ತಗೆ22

****