ಈ ಶರೀರದ ಭ್ರಾಂತಿ ಇನ್ನೇಕೆ ಮನವೆ ||ಪ||
ವಾಸುದೇವನ ನೆನೆದು ಸುಖಿಯಾಗೊ ಮನುಜ ||ಅ||
ದಂತಗಳು ಸಡಲಿದವು ಧಾತುಗಳು ಕುಂದಿದವು
ಕಾಂತೆಯರು ಜರೆದು ಓಕರಿಸುವರೊ
ಚಿಂತೆಯೇತಕೆ ಬಯಲಾದ ದೇಹಕ್ಕೆ
ಇಂತೆಂದು ತಿಳಿದು ಶ್ರೀಕಾಂತನ ನೆನೆ ಮನವೆ ||
ಕಾಲು ಜವಗುಂದಿದವು ಕಣ್ಣುಗಳು ಇಂಗಿದವು
ಮೇಲೆ ಯೌವನ ಪೋಗಿ ಜರೆಯು ಬಂತು
ಕಾಲಕರ್ಮಂಗಳು ಸಂಧಿಸಿದ ಸಮಯದಿ
ಬಾಲತನದ ಆಸೆಯಿನ್ನೇಕೆ ಮನವೆ ||
ನೀರ ಬೊಬ್ಬುಳಿಯಂತೆ ಸ್ಥಿರವೆಂದು ಈ ದೇಹ
ಧಾರಿಣೀ ಧನ ಸ್ತ್ರೀಗೆ ಮರುಳಾಗಬೇಡ
ನೀರಜನಾಭ ಶ್ರೀಪುರಂದರವಿಠಲನ್ನ
ಸೇರಿ ಸುಖಿಸದೆ ಸುಮ್ಮನಿರಬೇಡ ಮನವೆ ||
****
ರಾಗ ತೋಡಿ ತ್ರಿಪುಟ ತಾಳ (RAGA TALA MAY DIFFER IN AUDIO)
pallavi
I sharIrada bhrAnti innyAke manave
anupallavi
vAsudEvana nenedu sukhiyAgo manave
caraNam 1
dantagaLu saDalidavu dhAtuaLu kundidavu kAnteyaru jaredu Okarisuvaro
cinteyinyAtake bhayalAda dEhakke intendu tiLidu shrIkAntana nene manave
caraNam 2
kAlu javagundidavu kaNNugaLu ingidavu mEle yauvana pOgi jareyu bandu
kAla karmangaLu sandhisida samayadi bAlatanada AseyinnEke manave
caraNam 3
nIra bobbuLiyante sthiravendu I dEha dhAriNI dhana strIge maruLAga bEDa
nIrajanAbha shrI purandara viTTalanna sEri sukhisade summanira bEDa manave
***
ಈ ಶರೀರದ ಭ್ರಾಂತಿ ಇನ್ನೇಕೆ ಮನವೆ |
ವಾಸುದೇವನ ನೆನೆದು ಸುಖಿಯಾಗು ಮನವೆ ಪ.
ಕಾಲು ಜವಗುಂದಿದುವು ದೃಷ್ಟಿಗಳು ಹಿಂಗಿದುವು |ಮೇಲೆ ಜವ್ವನ ಹೋಗಿ ಜರೆಯಾದಗಿತು ||ಕಾಲ - ಕರ್ಮಾದಿಗಳು ಕೂಡಿದಾಕ್ಷಣದಲಿ |ಬೀಳುವೀ ತನುವಿನೊಳ್ ಇನ್ನಾಸೆಯ ಮನವೆ 1
ದಂತಗಳು ಸಡಿಲಿದುವು ಧಾತುಗಳು ಕುಂದಿದುವು |ಕಾಂತೆಯರುಜರಿದು ಓಕರಿಸುವರು ||ಭ್ರಾಂತಿ ಇನ್ನೇಕೆ ಈ ತನುವು ಬೀಳದ ಮುನ್ನ |ಸಂತತ ಶ್ರೀ ಹರಿಯ ನೆನೆ ಕಾಣೊ ಮನವೆ 2
ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ |ಸಾರುತಿದೆ ನೀ ಮೆಚ್ಚಿ ಮರುಳಾಗದೆ ||ಶ್ರೀರಮಣ ಪುರಂದರವಿಠಲನ ನೆನೆ ನೆನೆದು |ಸೂರೆಗೊಳ್ಳಿರೊ ಸ್ವರ್ಗ ಸುಮ್ಮನಿರಬೇಡಿ 3
******