Showing posts with label ಮಾರುತವತಾರನೀತ ನಮ್ಮ ಗುರು ಕಾಣಿರೋ purandara vittala. Show all posts
Showing posts with label ಮಾರುತವತಾರನೀತ ನಮ್ಮ ಗುರು ಕಾಣಿರೋ purandara vittala. Show all posts

Thursday, 5 December 2019

ಮಾರುತವತಾರನೀತ ನಮ್ಮ ಗುರು ಕಾಣಿರೋ purandara vittala

ರಾಗ ಶಂಕರಾಭರಣ ಆದಿ ತಾಳ 

ಮಾರುತವತಾರನೀತ ನಮ್ಮ ಗುರು ಕಾಣಿರೋ
ಭಾರತಿಯ ರಮಣನೇ ಮೂಲಗುರು ಕಾಣಿರೋ ||ಪ ||

ಸಂತತಿಸಹಿತ ರಾವಣಬಲವ ತರಿದ
ಹೊಂತಕಾರಿ ಹನುಮಂತ ನಮ್ಮ ಗುರು ಕಾಣಿರೋ
ಅಂತಕನ ಪುರಿಗೆ ಕೌರವರನು ಕಳುಹಿದ
ಪಂಥದೊಳು ಭೀಮಸೇನ ಮೂಲ ಗುರು ಕಾಣಿರೋ ||

ಯತಿ ರೂಪಿನಲಿ ಕ್ಷಿತಿಯ ಮೇಲೆ ನಿಂದು ದು-
ರ್ಮತವ ಖಂಡಿಸಿದಾತ ನಮ್ಮ ಗುರು ಕಾಣಿರೋ
ಶ್ರುತಿಗೆ ಸಮ್ಮತವಾದ ಮತವ ಸ್ಥಾಪಿಸಿ
ಮುಕ್ತಿಪಥವ ತೋರಿಸಿದಾತ ಮೂಲ ಗುರು ಕಾಣಿರೋ ||

ಹೇಮಭೂಮಿಯ ಕಾಮಿನಿಯ ವ್ರತವಳಿದು ನಿ-
ಸ್ಸೀಮನೆನಿಸಿದಾತ ನಮ್ಮ ಗುರು ಕಾಣಿರೋ
ರಾಮಚಂದ್ರ ಪುರಂದರವಿಠಲನ ದಾಸರಾದ
ಶ್ರೀ ಮಧ್ವಾಚಾರ್ಯರೆ ನಮ್ಮ ಗುರು ಕಾಣಿರೋ ||
***

pallavi

mArutavatAranIta namma guru kANirO bhAratiya ramaNanE mUla guru kANirO

caraNam 1

santati sahita rAvaNa balava tarida hontakAri hanumanta namma guru kANirO
antakana purige kauravanu kaLuhida bandhadoLu bhImasEna mUla guru kANirO

caraNam 2

yati rUpinali kSitiya mEle nindu durmatava kaNDisidAta namma guru kANirO
shrutige sammatavAda matava sthApisi mukti padava tOrisidAta mUla guru kANirO

caraNam 3

hEma bhUmiya kAminiya vrAtavanuLidu nissImanenisidAta namma guru kANirO
rAmacandra purandara viTTalana dAsarAda shrI madhvAcAryare namma guru kANirO
***