Showing posts with label ಕದನ ಕಠೋರಿ ಬಂದುಕಾಲುಕೆದರ ಬ್ಯಾಡ ಮದನನ ramesha. Show all posts
Showing posts with label ಕದನ ಕಠೋರಿ ಬಂದುಕಾಲುಕೆದರ ಬ್ಯಾಡ ಮದನನ ramesha. Show all posts

Wednesday, 4 August 2021

ಕದನ ಕಠೋರಿ ಬಂದುಕಾಲುಕೆದರ ಬ್ಯಾಡ ಮದನನ ankita ramesha

..

ಕದನ ಕಠೋರಿ ಬಂದುಕಾಲುಕೆದರ ಬ್ಯಾಡ ಮದನನ ಮಾತಿಗೆ ಇದುರೇನ ಎಲ್ಲ ನೀ ನೋಡ ಪ.

ಓಡಿ ಬಂದವಳೆಂದು ಆಡಿದೆ ನೀ ಎನಗೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಎಲೆ ನೋಡೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಸುಭದ್ರ ನೋಡಿಕೋನಿನ ಮನದಲ್ಲೆ ಎಲ್ಲ ನೋಡೆ1

ಅಣ್ಣನ ವಂಚಿಸಿ ಓಡಿ ಬಂದವಳೆಂದುಎನ್ನನೆ ನುಡಿದೆ ಸುಭದ್ರಾ ಎಲೆ ನೋಡೆಎನ್ನನೆ ನುಡಿದೆ ಸುಭದ್ರಾನಿನ್ನಂತೆ ಸನ್ಯಾಸಿಯೊಡನೆ ಬರಲಿಲ್ಲ ಎಲ್ಲಿ ನೋಡೆ2

ಅತ್ತೆಯ ಮಗಳೆಂದು ಹತ್ತೆಂಟು ತಾಳಿದೆ ಒಂದುತ್ತರ ನಿನಗೆ ಕೊಡತೇನ ಎಲೆ ನೋಡೆಒಂದುತ್ತರ ನಿನಗೆ ಕೊಡತೇನ ಸುಭದ್ರಾಚಿತ್ತಕ್ಕೆ ಹೋಗಿ ನಡುವಂತೆ ಎಲೆ ನೋಡೆ 3

ಒಂದು ನುಡಿದು ಹನ್ನೊಂದು ನುಡಿಸಿಕೊಂಡೆಕುಂದದಂಥsÀವಳೆ ನಿನ್ನ ಬಣ್ಣ ಎಲೆ ನೋಡೆಕುಂದದಂಥsÀವಳೆ ನಿನ್ನ ಬಣ್ಣ ಸುಭದ್ರಾಬಂದದಾರಿ ಹಿಡಿದು ತಿರುಗಿ ಹೋಗೆ 4

ಬಾಳುವರ ಮನೆ ಮುಂದೆ ಕೋಳಿ ಕೂಗಿದಂತೆವೀಳ್ಯವ ಕೊಟ್ಟು ಯಾತರಿಂದ ಎಲೆನೋಡೆವೀಳ್ಯವ ಕೊಟ್ಟು ಯಾತರಿಂದ ಹೊಡೆಸಿಕೊಂಡಿನಿಲ್ಲದೆ ಹೋಗೆ ಮನೆತನಕ ಎಲೆ ನೋಡೆ 5

ಕುದುರೆಯ ಸಂಗಡ ಕುರಿ ಹುಲ್ಲು ಮೆಯ್ದರೆಕುದುರೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಕುದುರೆ ಹಿಂಗಾಲಿಲೆ ಒದೆಯದೆ ಸುಭದ್ರಾಸುದತೆ ರುಕ್ಮಿಣಿಗೆ ಸರಿಯೇನೆ ನೋಡೆ6

ಆನೆಯ ಸಂಗಡ ಆಡು ಹುಲ್ಲು ಮೆಯ್ದೆರೆ ಆನೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಆನೆ ಹಿಂಗಾಲಿಲೆ ಒದೆಯದೆ ಸುಭದ್ರಾನೀ ರಾಮೇಶನ ಮಡದಿಯ ಸರಿಯೇನೆ ಎಲೆ ನೋಡೆ 7

***