ಭೂಮಿಯನೆ ಬಿಡಿಸೋ ಭೂದೇವಿ ರಮಣಾ
ನಾ ಮಾಡುವೆ ನಿನಗೆ ಶರಣಾ ಪ.
ನಾನೊಲ್ಲೆ ನಾನೊಲ್ಲೆ ಈ ಕರಿ ಕರಿಯಾ ಸಂಸಾರ ಥೆರಿಯಾ ಅ.ಪ.
ಯನ್ನಿಂದ ದುಷ್ಟಕಾರ್ಯವನು ಮಾಡಿಸಿದಿಯೋ ನೀನು
ಇಷ್ಟು ನಾನೀಗ ಉದಾಶೀನಳಾಗಿ ಇರುವೊದುಕಿಂತಾ
ವೊಂದಷ್ಟು ಪ್ರಾಣವನು ಬಿಡಿಸೊ ಶ್ರೀಶಾ ಶ್ರೀನಿವಾಸಾ 1
ಸರ್ವಜ್ಞರ ಮತದೊಳಗೆನ್ನ ಪುಟ್ಟಿಸಿದೆಯೋ
ಅe್ಞÁನ ಅಧಃಪತದಲಿ ಮಗ್ನಳಾಗಿರುವೆನು
ಸುe್ಞÁನವನು ನಾನರಿಯೆನು ಭವಾಬ್ಧಿಯನು ದಾಟಿಸು ನೀನು 2
ದುರ್ಜನರ ಸಂಗವಾ ಕೊಡಬ್ಯಾಡ
ಸಜ್ಜನರ ಸಂಗವ ಕೊಡು ಬ್ಯಾಗ
ಮೂರ್ಜಗದೊಡೆಯನೇ ನೀಯನ್ನ ಪಾಲಿಸಯ್ಯ
ಕಾಳಿಮರ್ಧನ ಕೃಷ್ಣರಾಯ 3
****