ರಾಗ - : ತಾಳ -
ಕೊಟ್ಟ ಬಿಡಾರದಲಿ ಎಷ್ಟು ದಿನ ಜೀವಿಸಲೋ
ಕಷ್ಟಪಡಲಾರೆನೋ ಹರಿಯೇ ll ಪ ll
ಕೋಟಲೆಯ ಸಂಸಾರ ಸಾಗರದೊಳು ಸಿಲುಕಿ
ಪಾಟು ಪಡಲಾರೆನು ಹರಿಯೇ ll ಅ ಪ ll
ಕಟ್ಟುಗಳು ಸಡಲಿದವು ಬಳೆಮೊಳೆ ಕದಲಿದವು
ನೆಟ್ಟ ಕಂಬಗಳು ಕುಸಿದವು I ತೊಟ್ಟಿ ಪಡಸಾಲೆಗಳು ಬಟ್ಟ ಬಯಲಾದವು
ಕಟ್ಟಿ ಹೊತ್ತಿಸಲಾರೆನು ಹರಿಯೇ ll 1 ll
ಆರೆರಡು ಹಾರಿದವು ಹಾರಿ ಹೋಯಿತು ಹೊದಿಕೆ
ಜಾರಿ ಬಿದ್ದವು ಗಳುಗಳು l
ಆರು ಮೂರೆಂಬ ತಲೆ ಬಾಗಿಲೆಲ್ಲವು ಕುಸಿದು ಸೋರುತಿದೆ ನಾಲ್ಕು ಕಡೆಗೆ ಸ್ವಾಮಿ ll 2 ll
ಗೇಣೇಳು ನಿಚ್ಚಳಿಕೆ ಬಾಡದ ನೆಲೆಸೂತ್ರ
ಶೋಣಿಯೋಳು ಓಲ್ಯಾಡುತಾ l ಪ್ರಾಣನಾಯಕ ಗುರುಗೋಪಾಲ ವಿಠಲ
ಆನಂದ ನಿಲಯಾವಾಸ ಶ್ರೀಶ ll 3 ll
***