Showing posts with label ಹರಿದಿನದಲಿ ಉಂಡ ನರರಿಗೆ ಘೋರ ನರಕ ತಪ್ಪದು purandara vittala HARIDINADALI UNDA NARARIGE GHORA NARAKA TAPPADU. Show all posts
Showing posts with label ಹರಿದಿನದಲಿ ಉಂಡ ನರರಿಗೆ ಘೋರ ನರಕ ತಪ್ಪದು purandara vittala HARIDINADALI UNDA NARARIGE GHORA NARAKA TAPPADU. Show all posts

Monday 6 December 2021

ಹರಿದಿನದಲಿ ಉಂಡ ನರರಿಗೆ ಘೋರ ನರಕ ತಪ್ಪದು purandara vittala HARIDINADALI UNDA NARARIGE GHORA NARAKA TAPPADU







ಹರಿದಿನದಲಿ ಉಂಡ ನರರಿಗೆ -ಘೋರ |
ನರಕ ತಪ್ಪದು ಎಂದುಶ್ರುತಿಸಾರುತಲಿದೆ||

ಗೋವ ಕೊಂದ ಪಾಪ, ಸಾವಿರ ವಿಪ್ರರ |ಜೀವಹತ್ಯದ ಮಾಡಿದ ಪಾಪವು ||
ಭಾವಜನಯ್ಯನ ದಿನದಲುಂಡವರಿಗೆ |ಕೀವಿನೊಳಗೆ ಹಾಕಿ ಕುದಿಸುವ ಯಮನು |
ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |ಅಂದಿನ ಅನ್ನವು ನಾಯ ಮಾಂಸ ||
ಮಂದರಧರನ ದಿನದಲುಂಡವರನು |ಹಂದಿಯ ಸುಡುವಂತೆ ಸುಡುವನು ಯಮನು|
ಅನ್ನ -ಉದಕ ತಾಂಬೂಲ – ದರ್ಪಣಗಳು |ಚೆನ್ನವಸ್ತ್ರಗಳೆಲ್ಲ ವರ್ಜಿತವು ||
ತನ್ನ ಸತಿಯ ಸಂಗ ಮಾಡುವ ಮನುಜನ |ಬೆನ್ನಲಿ ಕರುಳ ಉಚ್ಚಿಸುವನು ಯಮನು|
ಇಂತು ಏಕಾದಶಿ ಉಪವಾಸಜಾಗರ |ಸಂತತ ಕ್ಷೀರಾಬ್ಧಿಶಯನನ ಪೂಜೆ ||
ಸಂತೋಷದಿಂದಲಿ ಮಾಡಿದ ಜನರಿಗ – |ನಂತ ಫಲವನೀವ ಪುರಂದರವಿಠಲ
***
 
Haridinadali unda nararige gora naraka tappadendu shruti saarutalide | pa |
govu konda paapa viprara saavira | jivahatyava maadida paapavu |
bhaavajanayyana dinadi undaravanu | kivinolage haaki kudisuva yamanu 
ondondu agulige koti koti krimigalu | andina annavu naayi maamsavu | mandaroddhaarana dinadi undavarannu | handiya suduvante sudisuva yamanu 
anna paana taambula darpanagalu | chenna vastragalella varjitavu |
tanna satiyara sanga maadida nararige | bennali karula tegeva kandya yamanu 
intu Ekaadashi upavaasa jaagara | santata kshiraabdhishayanana puje |
santushtiyindali maadida janarige | ananta phalaviva purandaravithala ||
***

ರಾಗ ಕಾಂಭೋಜಿ. ಆದಿ ತಾಳ (raga tala may differ in audio)

pallavi

hari dinadali uNDa nararige ghOra naraka tappaduyendu shruti sArutalide

caraNam 1

gOvu konda pApa viprara sAvira jIva hatyava mADida pApavu
bhAvajanayyana dinadi uNDavaranu kIvinoLage hAki kudisuva yamanu

caraNam 2

ondondu aguLige kOTi kOTi krimigaLu andina annavu nAyi mAmsavu
mandarOddhArana dinadi uNDavrannu handiya suDuvante suDisuva yamanu

caraNam 3

anna pAna tAmbUla darpaNagaLu cenna vastragaLella varjitavu
tanna satiyara sanga mADida nararige bennali karuLa tegeva kaNDya yamanu

caraNam 4

jAvada jAgara kratu nALku sAvira jAva nAlkara phalake mitiyillavu
dEva dEvana dinadi nidre gaivana kAvaliyoLu hAki hurisuva yamanu

caraNam 5

intu EkAdashi upavAsa jAgara santata kSIrAbdhi shayanana pUje
santuSTiyindali mADida janarigadyanta phalavIva purandara viTTala
***


ಹರಿ ದಿನದಲಿ ಉಂಡ ನರರಿಗೆ
ಘೋರ ನರಕ ತಪ್ಪದು ಎಂದು ಶ್ರುತಿ ಸಾರುತಲಿದೆ

ಗೋವು ಕೊಂದ ಪಾಪ ವಿಪ್ರರ ಸಾವಿರ
ಜೀವ ಹತ್ಯವ ಮಾಡಿದ ಪಾಪವು
ಭಾವಜನಯ್ಯನ ದಿನದಿ ಉಂಡವರನು
ಕೀವಿನೊಳಗೆ ಹಾಕಿ ಕುದಿಸುವ ಯಮನು

ಒಂದೊಂದು ಅಗುಳಿಗೆ ಕೋಟಿ ಕೋಟಿ ಕ್ರಿಮಿಗಳು
ಅಂದಿನ ಅನ್ನವು ನಾಯಿ ಮಾಂಸವು
ಮಂದರೋದ್ಧಾರನ ದಿನದಿ ಉಂಡವರನ್ನು
ಹಂದಿಯ ಸುಡುವಂತೆ ಸುಡಿಸುವ ಯಮನು

ಅನ್ನ ಪಾನ ತಾಂಬೂಲ ದರ್ಪಣಗಳು
ಚೆನ್ನ ವಸ್ತ್ರಗಳೆಲ್ಲ ವರ್ಜಿತವು
ತನ್ನ ಸತಿಯರ ಸಂಗ ಮಾಡಿದ ನರರಿಗೆ
ಬೆನ್ನಲಿ ಕರುಳ ತೆಗೆವ ಕಂಡ್ಯ ಯಮನು

ಜಾವದ ಜಾಗರ ಕ್ರತು ನಾಲ್ಕು ಸಾವಿರ
ಜಾವ ನಾಲ್ಕರ ಫಲಕೆ ಮಿತಿಯಿಲ್ಲವು
ದೇವ ದೇವನ ದಿನದಿ ನಿದ್ರೆ ಗೈವನ
ಕಾವಲಿಯೊಳು ಹಾಕಿ ಹುರಿಸುವ ಯಮನು

ಇಂತು ಏಕಾದಶಿ ಉಪವಾಸ ಜಾಗರ
ಸಂತತ ಕ್ಷೀರಾಬ್ಧಿಶಯನನ ಪೂಜೆ
ಸಂತುಷ್ಟಿಯಿಂದಲಿ ಮಾಡಿದ ಜನರಿಗ-
ತ್ಯಂತ ಫಲವೀವ ಪುರಂದರವಿಠಲ
*********

ರಾಗ: ಶಂಕರಾಭರಣ       ತಾಳ: ಆಟ

ಹರಿದಿನದಲಿ ಉಂಡ ನರರಿಗೆ ಘೋರ
ನರಕ ತಪ್ಪದು ಎಂದು ಶ್ರುತಿಯು ಸಾರುತಲಿದೆ || ಪ ||

ಗೋವ ಕೊಂದ ಪಾಪ ಸಾವಿರ ವಿಪ್ರರ
ಜೀವಹತ್ಯವ ಮಾಡಿದ ಪಾಪವು
ಭಾವಜನಯ್ಯನ ದಿನದಲುಂಡವರಿಗೆ
ಕೀವಿನೊಳಗೆ ಹಾಕಿ ಕುದಿಸುವ ಯಮನು || ೧ ||

ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿ
ಅಂದಿನ ಅನ್ನವು ನಾಯ್‍ಮಾಂಸವು
ಮಂದರಧರನ ದಿನದಲುಂಡವರನು
ಹಂದಿಯ ಸುಡುವಂತೆ ಸುಡಿಸುವ ಯಮನು || ೨ ||

ಅನ್ನ ಉದಕ ತಾಂಬೂಲ ದರ್ಪಣಗಳು
ಚಿನ್ನ ವಸ್ತ್ರಗಳೆಲ್ಲ ವರ್ಜಿತವು
ತನ್ನ ಸತಿಯ ಸಂಗ ಮಾಡುವ ಮನುಜನ
ಬೆನ್ನಲಿ ಕರುಳ ತೆಗೆಸುವ ಯಮನು || ೩ ||

ಜಾವದ ಜಾಗರ ಕ್ರತು ನಾಲ್ಕು ಸಾವಿರ
ಜಾವನಾಲ್ಕರ ಫಲಕೆ ಮಿತಿಯಿಲ್ಲವು
ದೇವದೇವನ ದಿನದಿ ನಿದ್ರೆಯಗೈದರೆ ಹುರಿ-
ಗಾವಲಿನೊಳು ಹಾಕಿ ಹುರಿಸುವ ಯಮನು || ೪ ||

ಇಂತು ಏಕಾದಶೀ ಉಪವಾಸ ಜಾಗರ
ಸಂತತ ಕ್ಷೀರಾಬ್ಧಿಶಯನನ ಪೂಜೆ
ಸಂತೋಷದಿಂದಲಿ ಮಾಡಿದ ಜನರಿಗ-
ನಂತಫಲವನೀವ ಪುರಂದರವಿಠಲ || ೫ ||
*********