by ಗೋವಿಂದದಾಸ
ಸಂತೋಷ ಕಂಡ್ರೀ ಸ್ವಾಮಿ ಸಂತೋಷ ಕಂಡ್ರೀ ಪ
ಚಿಂತೆ ಚಿಂತೆ ಬಿಟ್ಟೀ ಶಾಂತದೂತನಾಗಿಕಂತುಪಿತನ ಚಿಂತಿಸುವಗೆ ಸಂತೋಷ ಕಂಡ್ರೀ1
ಕೆಟ್ಟ ದುಷ್ಟ ಕಾರ್ಯ ಮಾಡೀ ಕಷ್ಟ ನಷ್ಟಗಳಿಗೆ ಸಿಕ್ಕಿಹೊಟ್ಟೆಹೊರೆವದುಷ್ಟಗೆಲ್ಲ ಸಂತೋಷ ಕಂಡ್ರಿ2
ಆಶಾಪಾಶ ತ್ಯಜಿಸಿ ಹಲವು ಲೇಸು ಶ್ರೇಯ ಕಾಯಗೈದಈಶನಂಘ್ರಿ ದಾಸರಿಗೆ ಸಂತೋಷ ಕಂಡ್ರಿ3
ತರುಣಿ ತರುಣರಿದ್ದರೇನು ಧರಣಿಗರನಾದರೇನುಹರಿಯ ಕರುಣವಿಲ್ಲದುಂಟೇ ಸಂತೋಷ ಕಂಡ್ರೀ4
ಕಾಯದಲ್ಲಿ ಮೋಹ ತೊರೆದುಜೀಯಕೃಷ್ಣರಾಯನೆಂದುನ್ಯಾಯವಂತ ಜೀವರೀಗೆ ಸಂತೋಷ ಕಂಡ್ರೀ5
ಯುಕ್ತಾಯುಕ್ತ ಯೋಚಿಸದೆ ಪಕ್ತ ಕಾಮಸಕ್ತನಾದರಕ್ತಮದದ ಶಕ್ತಗಿಹುದೆ ಸಂತೋಷ ಕಂಡ್ರಿ6
ತಂದೆ ತಾಯಿ ನೀನೆಂದೆಂಬ ಬಂಧು ಬಳಗ ನೀನೆಂದೆಂಬಗೋವಿಂದನಾ ದಾಸರ್ಗೆಲ್ಲ ಸಂತೋಷ ಕಂಡ್ರೀ7
*******