" ಶ್ರೀ ಮುದ್ದುಮೋಹನವಿಠ್ಠಲರು ತಮ್ಮ ಪಟ್ಟದ ಶಿಷ್ಯರಾದ ಶ್ರೀ ಸುಬ್ಬರಾಯ ದಾಸರಿಗೆ ನೀಡಿದ ಅಂಕಿತ ನಾಮ" - " ಶ್ರೀ ತಂದೆ ಮುದ್ದುಮೋಹನ ವಿಠ್ಠಲ "
ತಂದೆ ಮುದ್ದು ಮೋಹನ ವಿಠಲ ಸಲಹಬೇಕಿವನ ಪ
ಕಂದುಗೊರಳನ ಪ್ರಿಯನೆ ಅಭಿವಂದಿಪೆನೊ ಸತತ ಅ.ಪ
ಶೋಕನಾಶನ ವಿಗತ ಶೋಕನಯ್ಯ ನೀ ವೇಗ
ವಾಕ್ಕು ಮೊದಲಾದ ಸರ್ವೇಂದ್ರಿಯಗಳಲಿ ನಿಂತು
ಲೋಕದೊಳಗೆ ಇವಗೆ ಬೇಕಾದ ವರಗಳನಿತ್ತು
ಲೌಕಿಕ ಮಾರ್ಗವನೆ ಬಿಡಿಸೊ ನಾಕಜನ ಪಿತನೆ 1
ಜ್ಞಾನ ಭಕ್ತಿ ವೈರಾಗ್ಯಗಳನೆಲ್ಲವೂ ಇತ್ತು
ಜ್ಞಾನಿಗಳ ಸಹವಾಸದೊಳಗೆ ರತಿಯನೆ ಕೊಟ್ಟು
ಹಾನಿ ವೃದ್ಧಿಗಳು ಏನೇನು ಬಂದರೂ
ಆನಂದವನೆ ಕೊಟ್ಟು ರಕ್ಷಿಸೊ ನರಹರೇ 2
ಕಾಮ ಕ್ರೋಧ ಮದ ಮತ್ಸರಗಳ ಕಡಿದು
ನಾಮೋಚ್ಚಾರಣೆ ಎಂಬ ವಜ್ರಕವಚವನೆ ತೊಡಿಸಿ
ತಾಮರಸವಂದ್ಯ ಶಿರಿ ಮುದ್ದುಮೋಹನವಿಠಲ
ಕಾಮಿತಾರ್ಥವ ಕೊಡೊ ಹೃತ್ಪದ್ಮದೊಳಗೆ ಪೊಳೆದು 3
***
ರಾಗ : ಕಾಂಬೋಧಿ ತಾಳ : ಝಂಪೆ
ತಂದೆ ಮುದ್ದುಮೋಹನವಿಠ್ಠಲ
ಸಲಹಬೇಕಿವನ ।। ಪಲ್ಲವಿ ।।
ಕಂದುಗೊರಳ ಪ್ರಿಯನೆ
ಅಭಿವಂದಿಪೆನು ಸತತ ।। ಅ. ಪ ।।
ಶೋಕನಾಶನ ವಿಗತ
ಶೋಕನಯ್ಯ ನೀ ವೇಗ ।
ವಾಕ್ಕು ಮೊದಲಾದ
ಸರ್ವೇಂದ್ರಿಯಗಳಲ್ಲಿ ನಿಂತು ।
ಲೋಕದೊಳಗೇ ಇವಗೆ
ಬೇಕಾದ ವರಗಳನಿತ್ತು ।
ಲೌಕಿಕ ಮಾರ್ಗವ ಬಿಡಿಸೊ
ನಾಕಜಪಿತನೇ ।। ಚರಣ ।।
ಜ್ಞಾನ ಭಕುತಿ ವೈರಾಗ್ಯ-
ಗಳೆಲ್ಲವೂ ಇತ್ತು ।
ಜ್ಞಾನಿಗಳ ಸಹವಾಸದೊಳಗೆ
ರತಿಯನೇ ಕೊಟ್ಟು ।
ಹಾನಿ ವೃದ್ಧಿಗಳು
ಏನೇನು ಬಂದರೂ ।
ಆನಂದವನೇ ಕೊಟ್ಟು
ರಕ್ಷಿಸೋ ನರಹರೇ ।। ಚರಣ ।।
ಕಾಮ ಕ್ರೋಧ ಮದ-
ಮತ್ಸರಗಳ ಕಡಿದು ।
ನಾಮೋಚ್ಛಾರಣೆಯೆಂಬ
ವಜ್ರ ಕವಚವನೆ ತೊಡಿಸಿ ।
ತಾಮರಸ ವಂದ್ಯ ಶಿರಿ
ಮುದ್ದುಮೋಹನವಿಠ್ಠಲ ।
ಕಾಮಿತಾರ್ಥವ ಕೊಡೋ
ಹೃತ್ಪದ್ಮದೊಳಗೆ ಪೊಳೆದು ।। ಚರಣ ।।
****