Showing posts with label ಎತ್ತಿದಳಾರತಿಯ ಶ್ರೀ ತುಳಸಿಗೆ ಭಕ್ತಿಭಾವ bheemesha krishna ETTIDALAARATIYA SRI TULASIGE BHAKTI BHAAVA. Show all posts
Showing posts with label ಎತ್ತಿದಳಾರತಿಯ ಶ್ರೀ ತುಳಸಿಗೆ ಭಕ್ತಿಭಾವ bheemesha krishna ETTIDALAARATIYA SRI TULASIGE BHAKTI BHAAVA. Show all posts

Saturday, 28 December 2019

ಎತ್ತಿದಳಾರತಿಯ ಶ್ರೀ ತುಳಸಿಗೆ ಭಕ್ತಿಭಾವ ankita bheemesha krishna ETTIDALAARATIYA SRI TULASIGE BHAKTI BHAAVA




csr and sudha sonny


ಶ್ರೀತುಳಸೀ ಆರತಿ ಹಾಡು
ಎತ್ತಿದಳಾರತಿಯಾ ಶ್ರೀ ತುಳಸಿಗೆ | 
ಭಕ್ತಿ ಭಾವಗಳಿಂದಲಿ ||ಪ||

ಎತ್ತಿದಳಾರತಿ ಸತ್ಯಾಧರ್ಮನ ಸತಿ | 
ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ || ಆ. ಪ.||

ಗಂಧ ಅರಿಶಿನ ಕುಂಕುಮ | 
ಪಾಂಚಾಲಿ ತಾ ವೃಂದಾವನ ಪೂಜಿಸಿ ||
ದುಂಡು ಮಲ್ಲಿಗೆ ಕರ್ಪೂರ ಧೂಪ ದೀಪಗಳಿಂದ | 
ಇಂದ್ರ ನಂದನ ಸತಿ ಒಂದೇ ಮನಸಿನಿಂದ || 1 ||

ಹಾರ ಕೇಯೂರದಿಂದ|
ಮುಕ್ತಾವಳಿ ನಾರಿ ತುಳಸಿಗೆ ಆರ್ಸಿಸಿ||
ಚಾರು  ಹಸ್ತಗಳಿಂದ ನಾರಿ ಬೊಗಸೆಯ ಒಡ್ಡಿ | 
ವಾರಿಜನಾಭನ ತೋರಿಸೆಂದೆನುತಲಿ || 2 ||

ಅನ್ನ  ಬೇಡಲು ಮುನಿಗಳು | 
ಪತಿಗಳು ಬಂದು ನನ್ನನ್ನೇ ಕೇಳುವರು |
ಪನ್ನಂಗವೇಣಿ ನಾ ನಿನ್ನ ಮೊರೆ ಹೊಕ್ಕೇನೆ | 
ಅನ್ನಾಂಗ ಶಯನನ ತೋರು ತೋರೆನುತಲಿ || 3 ||

ಕ್ಷುದದಿಂದಾದವರು ತಪಸಿಗಳೆಂದು  ಪತಿಗಳು ಹೇಳಿದರು |
ಪತಿದಾಯಕಿ ನಿನ್ನ ಪತಿ ಶ್ರೀ ಕೃಷ್ಣನ್ನ | 
ಅಚ್ಯುತಾನಂತನ ತೋರೆಂದು ತುಳಸಿಗೆ || 4 ||

ಬೇಡಿದ ಭಕ್ತರಿಗೆ ಶ್ರೀ ತುಳಾಸಿಯು|
ಸಾಯುಜ್ಯ ಪದವಿ ನೀಡಿ||
ವಾರಿಜ ನಾಭನ ತೋರುವೆನೆನುತಲಿ | 
ತೋರಿದಳು  ಭೀಮೇಶ ಕೃಷ್ಣನ ಸತಿ ತುಳಸಿಗೆ || 5||
***

Ettidalaaratiyaa shree tulasige | bhakti bhaavagalindali ||pa||
Ettidalaarati satyadharmana sati | achyutana torendu ati dainyadali || a. pa.||

Gandha parimala pushpavu | paanchaali taa vrundaavanava poojisi ||
Dundu mallige karpura dhoopa deepagalinda | indra nandana sati onde manasininda || 1 ||

Haara keyooragalu | muktaavali naari tulasige rachisi ||
Chaaru hastagalinda naari bogaseya oddi | vaarijanaabhana toru torenutali || 2 ||

Anna bedalu hrushigalu | patigalu bandu nannanne keluvaru |
Pannangaveni naa ninna more hokkene |  pannanga shayanana toru torenutali || 3 ||

Kshudheindalodaruvaru durvasarendu patigalu bedaruvaru |
Matidaayaki ninna pati shree krushnayyana | ati adbhutadi torisendu shree tulasige || 4 ||

Bedida bhaktarige tulasiy ninu| saayujya padavi needey||
Vaarija naabhana toridalaakshanadi | dheera bheemesha krushnana sati tulasige || 5||
***


ಎತ್ತಿದಳಾರತಿಯ ಶ್ರೀ ತುಳಸಿಗೆ ಭಕ್ತಿಭಾವಗಳಿಂದಲಿ
ಎತ್ತಿದಳಾರತಿ ಸತ್ಯಧರ್ಮನ ಸತಿ
ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ ||

ಗಂಧ ಪರಿಮಳ ಪುಷ್ಪವು ಪಾಂಚಾಲಿ ತಾ ವೃಂದಾವನವ ಪೂಜಿಸಿ
ದುಂಡುಮಲ್ಲಿಗೆ ಧೂಪ ದೀಪಗಳಿಂದಲಿ
ಇಂದ್ರನಂದನನ ಸತಿ ಒಂದೇ ಮನಸಿನಲಿ

ಹಾರಕೇಯೂರದಿಂದ ಚಿತ್ರಾವಳಿ ನಾರಿ ತುಳಸಿಗೆ ರಚಿಸಿ
ಚಾರುಹಸ್ತಗಳಿಂದ ನಾರಿ ಬೊಗಸೆ ಒಡ್ಡಿ
ವಾರಿಜನಾಭನ ತೋರಿಸೆಂದೆನುತಲಿ

ಅನ್ನ ಬೇಡೊ ಋಷಿಗಳು ಯತಿಗಳು ಬಂದು ನನ್ನನ್ನು ಕಾಡುತಿಹರು
ಪನ್ನಗವೇಣಿಯೆ ನಿನ್ನ ಮೊರೆಹೊಕ್ಕೆನೆ
ಪನ್ನಗಶಯನನ ತೋರಿಸೆಂದೆನುತಲಿ
***
ಕ್ಷುಧೆಯಿಂದ ಬಳಲುವರು ದೂರ್ವಾಸರು ಎನ್ನ ಪತಿಗಳು ಬೆದರುವರು
ಮತಿದಾಯಕಿ ನಿನ್ನ ಪತಿ ಶ್ರೀಕೃಷ್ಣಯ್ಯನ ಅತಿ ಅದ್ಭುತದಿ ತೋರಿಸು ಎಂದು ತುಳಸಿಗೆ
********

another

ಎತ್ತಿದಳಾರತಿಯಾ  ಶ್ರೀ ತುಳಸಿಗೆ  ಭಕ್ತಿ ಭಾವಗಳಿಂದಲಿ ।ಪ ।
ಎತ್ತಿದಳಾರತಿ  ಸತ್ಯಧರ್ಮನ  ಸತಿ ...... (೨)
ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ ।।ಅ . ಪ।।
                                                           (ಎತ್ತಿದಳಾರತಿಯ)

ಆರ ಕೇಯೂರದಿಂದ  ಮುಕ್ತಾವಳಿ ನಾರಿ ತುಳಸಿಗೆ ರಚಿಸಿ .....(೨)
ಚಾರು ಹಸ್ತಗಳಿಂದ  ನಾರಿ ಬೊಗಸೆವೊಡ್ಡಿ ....(೨)
ವಾರಿಜನಾಭನ್ನ  ತೋರಿಸೆಂದೆನುತಲಿ ।।೧।।
                                                            (ಎತ್ತಿದಳಾರತಿಯ)

ಅನ್ನ  ಬೇಡೋ ಋಷಿಗಳು ಪತಿಗಳು ಬಂದು ನಿನ್ನನ್ನು ಕಾಡುತಿಹರು
ಪನ್ನಂಗ ವೇಣಿ ನಿನ್ನ ಮೊರೆ ಹೊಕ್ಕೇನೆ .....(೨)
ಪನ್ನಂಗ ಶಯನನ  ತೋರಿಸೆಂದೆನುತಲಿ ।।೨।।

                                                          (ಎತ್ತಿದಳಾರತಿಯ)
******