ಪುರಂದರದಾಸರು
ಮಂತ್ರ ದೊರಕಿತು ನಾಮ ಮಂತ್ರ ದೊರಕಿತು |ಯಂತ್ರವಾಹಕನಾರಾಯಣನ ಪ
ಅಂತರಂಗದಿ ಜಪಿಸುವಂಥ ಅ.ಪ
ಆಶೆಯಲ್ಲಿ ಬೀಳಲಿಲ್ಲ ಕ್ಲೇಶಪಟ್ಟು ಬಳಲಲಿಲ್ಲ |ವಾಸುದೇವಕೃಷ್ಣನೆಂಬ ಶಾಶ್ವತದೀ ದಿವ್ಯ ನಾಮ1
ಅರ್ಥ ವೆಚ್ಚವಾಗಲಿಲ್ಲ, ಕಷ್ಟಪಟ್ಟು ಬಳಲಲಿಲ್ಲ |ಭಕ್ತಿಯಿಂದ ಭಜಿಸಿ ಮಹಾಮುಕ್ತಿ ಪದವಸೇರುವಂಥ 2
ಹೊದ್ದಿದ ಪಾಪವೆಲ್ಲ ಕಳೆದು, ಉದ್ಧಾರವಾಯಿತು -ಕುಲಕೋಟಿಯು |ಮುದ್ದು ಕೃಷ್ಣನ ದಿವ್ಯನಾಮ ವಜ್ರಕವಚ ಹೃದಯದಲ್ಲಿ 3
ಹಾಸಬಹುದು ಹೊದೆಯಬಹುದು, ಸೂಸಿಒಡಲ ತುಂಬಬಹುದು |ದಾಸರನ್ನು ಬಿಡೆದೆ ಪೊರೆವ ಶ್ರೀಶನೆಂಬ ದಿವ್ಯ ನಾಮ 4
ಒಂದುಬಾರಿಸ್ತುತಿಸಿದರೆ ಒಂದು ಕೋಟಿ ಜಪದಫಲವು |ಇಂದಿರೇಶ ಶ್ರೀಪುರಂದರವಿಠಲನೆಂಬ ದಿವ್ಯನಾಮ5
********