ಶ್ರೀನಿವಾಸಾ ನೀ ದಯಮಾಡೋ l
ಕರುಣದಿಂದಲಿ ನೀ ಎನ್ನ ನೋಡೋ ll ಪ ll
ಸ್ವಾಮಿ ಪುಷ್ಕರಣಿ ಸ್ನಾನವು ಮಾಡಿ l
ವರಹಾ ದೇವರ ದರುಶನ ನೋಡಿ l
ಸುತ್ತ ಭೂಪ್ರದಕ್ಷಿಣ ಮಾಡಿ l
ವೆಂಕಟೇಶನ ಪಾದವು ನೋಡಿ ll 1 ll
ಶುಕ್ಕರವಾರದ ಪುನಕಾಭಿಷೇಕಾ l
ಸಕ್ಕರಿಯು ಪಾಲು ಬೆಣ್ಣೆಯು ಬೇಕು l
ಹೊಕ್ಕಳದಲ್ಲಿ ಮಾಣಿಕದ ಬೆಳಕು l
ಫಣಿಯಲ್ಲಿ ಇಟ್ಟಾನೆ ಕಿರೀಟಾ ಠಿಕೂ ll 2 ll
ಕೇಸಕ್ಕೆನ್ನಾ ಉಣಲಾರೆ ಎಂದು ಓಡಿ l
ಹೋದಾ ಹನುಮಾ ತಾನೆಂದು l
ಸಂಕುಲ್ಹಾಕಿದ ಸ್ವಾಮಿ ತಾ ಬಂದೂ l
ಬಂದು ನಿಂತನು ಹನುಮಾ ತಾನಿಂದೂ ll 3 ll
ಅತಿರಸಾ ಅಪ್ಪಾಲುಗಳನೂ ಹುಗ್ಗಿ l
ಬುತ್ತಿ ಪೊಂಗುಲವಾ ಪಾಯಿಸ ವಪ್ಪಾದಿಂದಾ l
ವಡಿದ್ವಾಶಿಗಳನೂ ಕೊಂಡು l
ತಿಂಬೋರು ಪ್ರಸಾದ ಬೀರಿ ll 4 ll
ತೋಟ್ಲ ತೀರ್ಥಾ ಬಂಗಾರದ ಭಾವೀ l
ಅಡಗಿ ಮನೆಯೊಳು ಅನ್ನಪೂರ್ಣ ತಾಯೀ l
ಗುರುಮದ್ವೇಶಾವಿಟ್ಠಲ ತಾನು l
ವರವ ಕೊಡುವನು ಶ್ರೀ ವೆಂಕಟೇಶ ll 5 ll
***