Showing posts with label ಸುಖದಿ ಜೀವಿಸು ಬಾಲೆ ಸುಗುಣ ಶೀಲೆ ಸುಖದಿ ಜೀವಿಸು ಬಾಲೆ shyamasundara. Show all posts
Showing posts with label ಸುಖದಿ ಜೀವಿಸು ಬಾಲೆ ಸುಗುಣ ಶೀಲೆ ಸುಖದಿ ಜೀವಿಸು ಬಾಲೆ shyamasundara. Show all posts

Wednesday 1 September 2021

ಸುಖದಿ ಜೀವಿಸು ಬಾಲೆ ಸುಗುಣ ಶೀಲೆ ಸುಖದಿ ಜೀವಿಸು ಬಾಲೆ ankita shyamasundara

 ..

ಸುಖದಿ ಜೀವಿಸು ಬಾಲೆ ಸುಗುಣ ಶೀಲೆ

ಸುಖದಿ ಜೀವಿಸು ಬಾಲೆ ಪ


ಸುಖದಿ ಜೀವಿಸು ಬಾಲೆ | ಸುಕುಮಾರಿ ಗುಣಲೀಲೆ

ರುಕುಮಿಣೀಶನ ಭಕುತಳೆನಿಸಿದ

ಸಖುದೇವಿಯಂತೆ ಸಕಲ ಭಾಗ್ಯದಿ ಅ.ಪ


ಭೂಸುರೋತ್ಮರಿಂದಲಿ | ಗುರುಮಂತ್ರೋಪ

ದೇಶವಗೊಳ್ಳುತಲಿ | ಪ್ರತಿದಿವಸ ತಪ್ಪದೆ

ಬ್ಯಾಸರಿಯದೆ ಹರುಷದಲಿ | ಸದ್ಭಕ್ತಿ ಪೂರ್ವಕ

ದಾಸರ ಪದ ನಿತ್ಯದಲಿ | ನೀ ಪಾಡುತಲಿ

ಲೇಶವಾದರು ಸುಜನ ವೃಂದಕೆ

ದೂಷಿತ ಬಹು ದೋಷಕಂಜುತ

ವಾಸುದೇವನ ವಾಸರದಿ ಉಪ

ವಾಸವನು ಲೇಸಾಗಿ ಮಾಡುತ 1


ಭಾವ ಭಕುತಿಲಿರುವ | ಗೋ ತುಳಸಿ

ವೃಂದಾವನ ಪೂಜಿಸುತ | ವಿನಯದಿ ಅತ್ತಿ

ಮಾವರ ನುಡಿ ಕೇಳುತ | ಕೈಪಿಡಿದ ಪತಿ ಪರ

ದೇವನು ಎಂದೆನುತ | ಸಲೆ ಸೇವಿಸುತ್ತ

ಆವ ಕಾಲ ಕಪಟ ಮತಿಗಳ

ಠಾವಿಗ್ಹೋಗದೆ ಪರರ ಒಡವೆಯ

ಬೇವಿನಂದದಿ ಭಾವಿಸುತ ಸಂ

ಭಾವಿತಳು ನೀನಾಗಿ ಜಗದೊಳು 2


ಮಂದ ಮತಿಯರ ಕೂಡದೆ | ಎಂದೆಂದಿಗು ಪರ

ನಿಂದೆ ಮಾತುಗಳಾಡದೆ ಅವರೊಲುಮೆಯಿಒಂದಲಿ

ಕಂದನ ಪಡಿ ಪ್ರೇಮದಿ | ಸಂದೇಹ ಪಡದೆ

ತಂದೆ ತಾಯಿಗೆ ಕುಂದು ತಾರದೆ

ನಂದ ಕಂದ ಮುಕುಂದ ಶಾಮ

ಸುಂದರನ ಶುಭನಾಮ ಬಿಡದಲೆ

ಒಂದೆ ಮನದಲಿ ಧ್ಯಾನಿಸುತ ಚಿರ 3

***