Showing posts with label ಬನ್ನ ಬಡಿಸದಿರು ಹರಿಯೆ ankita rukmini krishna nandana BANNA BADISADIRU HARIYE. Show all posts
Showing posts with label ಬನ್ನ ಬಡಿಸದಿರು ಹರಿಯೆ ankita rukmini krishna nandana BANNA BADISADIRU HARIYE. Show all posts

Friday 27 December 2019

ಬನ್ನ ಬಡಿಸದಿರು ಹರಿಯೆ ankita rukmini krishna nandana BANNA BADISADIRU HARIYE



Audio by Sri. Gururaj Chitaguppi Dharwad +91 79756 94546

ರಾಗ :  ಬಿಹಾಗ್ (ಹಿಂದೂಸ್ತಾನಿ )
ತಾಳ : ಕೆಹೆರವ (ನಾಲ್ಕು ಮಾತ್ರಾ )

ಬನ್ನ  ಬಡಿಸದಿರು  ಹರಿಯೆ  ಅನ್ಯರವನಿವನೆಂದು |
ಎನ್ನ ಅಪರಾಧಗಳ  ಮನ್ನಿಸಿ  ಕಾಯೊ ಹರಿಯೆ ||ಪ ||

ಸಂಸ್ಕೃತ  ಸಾಹಿತ್ಯದಲಿದ್ದ  ಪಾಂಡಿತ್ಯದ ಮದದಲಿ |
ಪ್ರಾಕೃತ ಕನ್ನಡವ  ನಿಂದಿಸುತ  ಜನರಲ್ಲಿ ||
ವಿಕೃತ  ಮನದಿಂದ  ವಿಜಯ ದಾಸರಾಹ್ವಾನ |
ಅಸಂಸ್ಕೃತ  ನಡೆಯಿಂದ ತಿರಸ್ಕರಿ ಸಿ  ಅಪಮಾನ  ಗೈದಿರಲು ||1||

ಮನನೊಂದು  ವಿಜಯದಾಸರು  ಇರುತಿರಲು |
ಪಂಡಿತನ  ಉದರ ಶೂಲೆಯ ಬಾಧೆ  ಕಾಡಲು ||
ಅನೇಕ ಔಷಧ  ಉಪಚಾರ  ಮಾಡಿದರು ಗುಣಕಾಣದೆ |
ಅನ್ನ  ಪಾನ  ಮಾಡದಲೆ  ಖಿನ್ನನಾಗಿರಲು ||2||

ವಿಜಯ ದಾಸರ ಶಿಷ್ಯನ ಕೈಯಲ್ಲಿ ಪಂಡಿತನ |
ನಿಜ ಉದರ  ಶೂಲೆಯನು ನಿವಾರಿಸಿ ಆಯುರ್ದಾನವ  ಮಾಡಿಸಿ ||
ಸಜ್ಜನನ ಮಾಡಿ ಹರಸಿ  ಜಗನ್ನಾಥ ದಾಸನಾಗಿಸಿದೆ |
ಅಜರಾಮರ ಮೇರು ಕನ್ನಡ ಕಾವ್ಯ   "ಹರಿಕಥಾಮೃತಸಾರ " ಪ್ರಸಾದಿಸಿದೆ ||3||

ನಿನ್ನವರೆಂದು ದಾಸರೆಲ್ಲರ ಉದ್ಧರಿಸಿದ  ದೇವಾ |
ನನ್ನನ್ನೂ ಹರಸೆಂದು ಬೇಡುತಿರುವೆ  ನಾನಿಂದು ||
ಹೀನಗುಣಸಂಪನ್ನ  ಇವನೆಂದು ನನ್ನನ್ನು |ಉದಾ-
ಸೀನ ಮಾಡದಲೆ ಕರುಣೆಯ ಸುರಿಸೊ ದೇವಕಿತನಯ ||4||

ನಾನು ನಾನೆಂಬ ಅಹಂಕಾರದಲಿ ನಿನ್ನ ಮರೆತೇನೋ ದೇವಾ |
ನಿನ್ನ ನನ್ನವನೆಂಬೆ  ನನ್ನ ನಿನ್ನವನಾಗಿಸೊ ||
ಹಣ್ಣಿನ ಸವಿಯು  ಜೇನಿನ  ಸಿಹಿಯು ಭಾವದಲ್ಲಿ ಬರಲಿ |
ಕಣ್ಣ ರೆಪ್ಪೆ ಕಾಯುವಂತೆ  ರುಕ್ಮಿಣಿ -ಕೃಷ್ಣ  ನಂದನನ ಕಾಯೊ ವಿಠಲ ||5||
*********

ರಚನೆ :  ಗುರುರಾಜ ಚಿಟಗುಪ್ಪಿ 
ಗಾಯನ : ಗುರುರಾಜ  ಚಿಟಗುಪ್ಪಿ 
ಸ್ವರ ಸಂಯೋಜನೆ : ಗುರುರಾಜ ಚಿಟಗುಪ್ಪಿ
*******