Showing posts with label ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ shyamasundara. Show all posts
Showing posts with label ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ shyamasundara. Show all posts

Wednesday, 1 September 2021

ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ankita shyamasundara

..

ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ಪ


ಸತತ ಮಾತಾ ಪಿತರ ವಚನ ಹಿತದಿ

ನೀನು ಆಲಿಸುತ | ಪತಿಯು ಪರದೈವವೆಂದು

ನೇಮದಿ ತಿಳಿದು ನೀ ಮಾಡುವುದು ವ್ರತ 1


ನಿರುತ ಗೋವು ಭೂಸುರರ ಸೇವಾ ಹರುಷದಲಿ

ಶ್ರೀ ಗೌರಿ ಪೂಜಾ ತರುಣಿ ಗೈದು ಜಗದಿ ನೀನು

ಮಾರಪಿತನ ಪಾದ ನೀ ಭಜಿಸೆ |

ಸುಕುಮಾರ ಪಿತನಪಾದ ಭಜಿಸೆ 2


ಕೋಮಲಾಂಗಿ ಸೋಮವದನೆ ಆ ಮಹಾತ್ಮ

ಶೀಲೆ ರಾಧಾ ಭಾಮೆ ತಾರಾಸೀತೆಯಂತೆ

ಶಾಮಸುಂದರನ ದಯ ಪಡೆಯೆ

ಶಿರಿಶಾಮಸುಂದರ ದಯ ಪಡೆಯೆ ನೀ 3

***