Showing posts with label ಹೆಸರು ತಂದಿರ್ಯಾ ಭಿಕ್ಷಕೆ govinda. Show all posts
Showing posts with label ಹೆಸರು ತಂದಿರ್ಯಾ ಭಿಕ್ಷಕೆ govinda. Show all posts

Tuesday, 19 November 2019

ಹೆಸರು ತಂದಿರ್ಯಾ ಭಿಕ್ಷಕೆ ankita govinda

by ಗೋವಿಂದದಾಸ
ಹೆಸರು ತಂದಿರ್ಯಾ ಭಿಕ್ಷಕೆ |ಹೆಸರು ತಂದಿರ್ಯಾ ಪ

ಅಸಮವೀರರೆಂಬ ಹೆಸರು |ಕುಶಲಗಾರರೆಂಬ ಹೆಸರುಶಶಿಯಂತೆ ಶೋಭಿಸುವ ಶಿಶುವು |ಕುಲಕೆ ಯೋಗ್ಯನೆಂಬ ಹೆಸರು ||ಹೆಸರು||1

ದಾನಶೀಲರೆಂಬ ಹೆಸರು |ಮಾನವಂತರೆಂಬ ಹೆಸರು |ಸಾನುರಾಗದಲ್ಲೂ ಆತ್ಮ |ಜ್ಞಾನಿಗಳೆಂದೆಂಬ ಹೆಸರು2

ಹಿರಿಯ ಮನೆತನದ ಹೆಸರು |ಗುರುಗಳಾ ಭಕ್ತಿಯಲಿ ಹೆಸರು |ಪರಮಭಾಗವತರ ತೆರದಿ |ಹರಿಯ ಶರಣರೆಂಬ ಹೆಸರು3

ಪುತ್ರವತಿಯರೆಂಬ ಹೆಸರು |ಸತ್ಯಶೀಲೆಯರೆಂಬ ಹೆಸರು |ಪತಿಯ ಸೇವೆಯಲ್ಲಿನಿರತ|ಪತಿವ್ರತೇಯರೆಂಬ ಹೆಸರು4

ಸತ್ಯಸಂಧರೆಂಬ ಹೆಸರು |ತತ್ವಜÕರೆಂದೆಂಬ ಹೆಸರು |ಚಿತ್ತ ಶುದ್ಧರೆನಿಸಿ | ಗೋವಿಂದಾನ |ದಾಸರೆಂಬ ಹೆಸರು5
********