ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿನ ಕಾಣದೆ ಪರಗತಿ ದೊರೆಯದು ಪ
ವೇದ ಶಾಸ್ತ್ರಗಳ ನೋದಿ ಭೇದಿಸದೆ | ವಾದದಿಂದ ಜನಗೆದ್ದನು | ಕೊಂಡ ಗಾದಿಯಂತೆ ನಿಜ | ಸಾಧುರ್ಹಾದಿಯನೆ ಮರೆತನು 1
ಕರ್ಮ ಧರ್ಮ ಸಾರಯಜ್ಞದಿ | ಭೂರಿಯಶವನೆ ಪಡೆದನು | ಏರಿ ಸ್ವರ್ಗದಿ ಜಾರಿ ಬಿದ್ದ ಸಂ | ಸಾರ ವಾರಿಧಿಯ ಸೇರಿದನು 2
ರಂಜನಿಂದ ವಣಭಂಜನ್ಯಾತರೆದು | ಕಂಜನಾಭನ ನೆರೆ ನಿಲುಕನು | ಅಂಜಲೆತ್ತಿದರ ಗುರು ಮಹಿಪತಿ | ಪ್ರಾಂಜಳಾಗಿ ಘನದೋರುವನು 3
****