Showing posts with label ನಾನೇನು ಕೊಡಲಿ ನಾಗಶಯನನಿಗೆ ಹದಿನಾಲ್ಕು ಲೋಕಗಳ ಆಳುವೋ ಅರಸಗೆ kamalesha. Show all posts
Showing posts with label ನಾನೇನು ಕೊಡಲಿ ನಾಗಶಯನನಿಗೆ ಹದಿನಾಲ್ಕು ಲೋಕಗಳ ಆಳುವೋ ಅರಸಗೆ kamalesha. Show all posts

Wednesday, 1 September 2021

ನಾನೇನು ಕೊಡಲಿ ನಾಗಶಯನನಿಗೆ ಹದಿನಾಲ್ಕು ಲೋಕಗಳ ಆಳುವೋ ಅರಸಗೆ ankita kamalesha

 ಸಾಹಿತ್ಯ-ಆನಂದದಾಸ

ನಾನೇನು ಕೊಡಲಿ ನಾಗಶಯನನಿಗೆ ।

ಹದಿನಾಲ್ಕು ಲೋಕಗಳ ಆಳುವೋ ಅರಸಗೆ ॥


ಸರ್ಪಶಯನನಿಗೆ ಸರ್ಪವೇಣಿಯ ಕೊಟ್ಟ ಸಾಗರರಾಜನು ಧನ್ಯನಾದನು ।

ಸಾಸಿರನಾಮದ ಶ್ರೀರಾಮಚಂದ್ರಗೆ ಸ್ವಾದಿಷ್ಟ ಫಲ ಕೊಟ್ಟ ಶಬರಿ ಧನ್ಯಳು ॥೧॥


ಆದಿಮೂರುತಿಗೆ ಅಕಳಂಕಚರಿತಗೆ ಅವಲಕ್ಕಿಯನು ಕೊಟ್ಟ ಅಣ್ಣ ಸುದಾಮನು ।

ಅವನೇ ತನ್ನವನೆಂದು ಅರಳು ಮಲ್ಲಿಗೆ ಕೊಟ್ಟ ಅಬಲೆ ರಾಧೆಯು ಅತಿ ಧನ್ಯಳು ॥೨॥


ಅಸುರಸಂಹಾರಗೆ ಎಸೆಳ್ಹಸು ಕೂಸಿಗೆ ಹಾಲು ಕೊಟ್ಟ ಯಶೋದೆ ಧನ್ಯಳು ।

ಕಮಲೇಶ ಕೃಷ್ಣಗೆ ಹೃತ್ಕಮಲವ ಕೊಟ್ಟ ಕಮಲಾಸನೆಯು ಅತಿ ಧನ್ಯಳು ॥೩॥

****