Showing posts with label ಅಂಧಂ ತಮಸು ಇನ್ನಾರಿಗೆ ಗೋವಿಂದನ ನಿಂದಿಸುವರಿಗೆ neleyadikeshava. Show all posts
Showing posts with label ಅಂಧಂ ತಮಸು ಇನ್ನಾರಿಗೆ ಗೋವಿಂದನ ನಿಂದಿಸುವರಿಗೆ neleyadikeshava. Show all posts

Tuesday 15 October 2019

ಅಂಧಂ ತಮಸು ಇನ್ನಾರಿಗೆ ಗೋವಿಂದನ ನಿಂದಿಸುವರಿಗೆ ankita neleyadikeshava

ಅಂಧಂತಮಸು ಇನ್ನಾರಿಗೆ
ಗೋವಿಂದನ ನಿಂದಿಸುವರಿಗೆ II ಪII

ಸಂದೇಹವಿಲ್ಲವು ಸಾರಿಸಾರಿಗೆ ವಾಯು-
ನಂದನನ ವಂದಿಸದವರಿಗೆ IIಅ ಪII


ಮಾತು ಮಾತಿಗೆ ಹರಿಯ ನಿಂದಿಸಿ-ಸ-
ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ-ವೇ-
ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟು
ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ II೧II

ಮೂಲಕವತಾರಕ್ಕೆ ಭೇದವು-ಮುಖ್ಯ
ಶೀಲಪಂಡಿತರಿಳಗೆ ಅತಿ ವಾದವು
ಲೀಲಾಸಾದೃಶ್ಯವ ತೋರುತ-ಲಿಂಗ-
ಭಂಗವಿಲ್ಲದ ದೇಹ ಹಾರುತ
ಮೂಲಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ II೨II

ವ್ಯಾಸರ ಮಾತುಗಳಾಡುತ-ವಿ-
ಶ್ವಾಸಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ-ಸಂ-
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ II೩II'
*****

ರಾಗ : ಭೈರವಿ  ತಾಳ : ಛಾಪು 


ಅಂಧಂ ತಮಸ್ಸು ಇನ್ಯಾರಿಗೆ । ಗೋ ।

ವಿಂದನ ನಿಂದಿಸುವರಿಗೆ ।। ಪಲ್ಲವಿ ।।


ಸಂದೇಹವಿಲ್ಲಾ ಯೆಂದೆಂದಿಗೆ । ವಾಯು ।

ನಂದನನ ನಿಂದಿಸುವರಿಗೆ ।। ಅ ಪ ।।


ಮಾತು ಮಾತಿಗೆ ಹರಿಯ ನಿಂದಿಸಿ । ಸ ।

ರ್ವೋತ್ತಮ ಶಿವನೆಂದು ವಂದಿಸಿ ।

ಧಾತು ಗ್ರಂಥಗಳೆಲ್ಲ ವೋಡಿಸಿ । ವೇ ।

ದಾಂತ ಪ್ರಮಾಣಗಳ್ಹಾರಿಸಿ ।।

ಸೋತು ಸಂಕಟ ಪಟ್ಟು ।

ಘಾತ ಕೊರಳೋಳಿಟ್ಟು ।

ನೀತಿ ಹೇಳುವ ಕೆಟ್ಟ ।

ಜ್ಯಾತಿಗಳಿಗಲ್ಲದೆ ।। ಚರಣ ।।


ಮೂಲಾವತಾರಕ್ಕೆ ಭೇದವ -

ಮುಖ್ಯ ಪಂಡಿತ ।

ರೊಳಗೆ ವಿವಾದವ ।

ಲೀಲಾವದೃಶ್ಯವ -

ತೋರುವ ಮ್ಯಾಲೆ ।।

ಲೀಲ ಭಂಗರಿಗೆದೆ ಹಾರುವ ।

ಮೂಲ ಮೂರುತಿ । ಕುಂತಿ ।

ಬಾಲನ್ನ ನೆನೆಯಾದ ।

ಶೀಲಗೆಟ್ಟು । ದುಃ ।

ಶೀಲರಿಗಲ್ಲದೆ ।। ಚರಣ ।।


ವ್ಯಾಸರ ಮಾತುಗಳಾಡುತ್ತಾ । ವಿ ।

ಶ್ವಾಸ ಘಾತಕತನ ಮಾಡುತ್ತಾ ।

ದೋಷವೆಂದರೆ ನೋಡಿಕೊಳ್ಳದೆ । ಸಂ ।।

ತೋಷವೆಂದು ತಾ ಬಾಳದೆ ।

ಶೇಷಶಯನ ಆದಿಕೇಶವರಾಯನ ।

ದಾಸರಾಗದೆ 

ಮಧ್ವ ದ್ವೇಷಿಗಳಿಗಲ್ಲದೆ ।। ಚರಣ ।।

****