Showing posts with label ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ rukmineesha vittala. Show all posts
Showing posts with label ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ rukmineesha vittala. Show all posts

Monday, 2 August 2021

ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ ankita rukmineesha vittala

 .

ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ

ಪೂಜಾ ಮಾಡೋಣ ಬಾರೆ ಪ.

ವನಜನ ನೇತ್ರೆಯ ತ್ರಿಜಗನ್ಮಾತೆ ಪ್ರಖ್ಯಾತೆ ಅ.ಪ.


ಮುತ್ತಿನ ತಟ್ಟೆಯೊಳ್ ಅರಿಶಿನ ಕುಂಕುಮ

ಅರ್ಥಿಯಿಂದಲಿ ಇಟ್ಟು

ಚಿತ್ತದೊಲ್ಲಭನ ಸ್ತುತಿಸಿ ಬೇಡಿಕೊಂಡು

ಮತ್ತೆ ನಿಮಗೆ ಕರವೆತ್ತಿ ಪ್ರಾರ್ಥಿಸುತಲಿ 1


ಗಂಧಪುಷ್ಪ ವಸ್ತ್ರಾಭರಣ ಆನಂದ ದೀಪಗಳಿಂದ

ಸುಂದರ ಪಾದವ ಇಂದು ನಾ ಪೂಜಿಪೆ

ಮಂದಿರದೊಳು ಆನಂದಭರಿತಳಾಗಿ ಬಾ 2


ರುಕ್ಮೀಶವಿಠಲನ ಪಟ್ಟದ ರಾಣಿ

ವಕ್ಷಸ್ಥಳದಲಿನಿಂತು ನಲಿಯುತ ಬಾ

ಭಕ್ತಜನರ ಮನೋಭೀಷ್ಟವ ಸಲಿಸುತ ಬಾ 3

***