ಕಾಖಂಡಕಿ ಶ್ರೀ ಮಹಿಪತಿರಾಯರು
ಕಡುಣಸಯ್ಯ ಗುರುವರೇಶ ಪರಮಪುರುಷ ಹರಿಸರ್ವೇಶ p
ನೋಡದಿರಯ್ಯ ಭಿನ್ನಭೇದ ಮಾಡೊ ದಯ ಸುಜ್ಞಾನಬೋಧ ನೀಡೊ ನಿಮ್ಮ ನಿಜಪ್ರಸಾದ ಕೊಡುವದನುಭವಾಮೃತಸ್ವಾದ 1
ಸರಿಯಗಾಣೆ ಹರಿಯೆ ನಿಮ್ಮ ಸಿರಿಯಲೋಲಾನಂದ ಬ್ರಹ್ಮ ಕರಿಯವರದ ದಯನಿಸ್ಸೀಮ ಮೊರಿಯಗೇಳಿ ಘನಮಹಿಮ 2
ಕರುಣ ದಯದಲಿ ನೀ ಪೂರ್ಣ ಶರಣಜನರ ಸುಭೂಷಣ ಮಹಿಪತಿಯ ಪ್ರಾಣ 3
***