Showing posts with label ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆ ankita gurumahipati ENU KAARANAVILLE NINDE ASHWATTHA SRI NAARASIMHE. Show all posts
Showing posts with label ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆ ankita gurumahipati ENU KAARANAVILLE NINDE ASHWATTHA SRI NAARASIMHE. Show all posts

Thursday, 2 December 2021

ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆ ankita gurumahipati ENU KAARANAVILLE NINDE ASHWATTHA SRI NAARASIMHE

 ಕಾಖಂಡಕಿ ಶ್ರೀ ಕೃಷ್ಣದಾಸರು

ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆನಿಸಿ ಅಜಭವರ ತಂದೇ ಪ 

ಹೊರೆಯ ಲೈತರಲು ಹಂಬಲಿಪ ಪ್ರಲ್ಹಾದಿಲ್ಲ | ಹಿರಣ್ಯ ಕಾಸುರನಿಲ್ಲ | ಸುರರಿಗುಪಟಳವೇನು ಇಲ್ಲ ಸ್ತಂಭ | ಬಿರಿದು ದೋರುವ ಅಹೋಬಲದ ಸ್ಥಳವಲ್ಲ 1 

ಸಿರಿಯ ಮೋಹನ ನಿಮ್ಮ ರೂಪವನೆ ಆವರಿಸಿ | ಮರದ ಪೇರ್ಗಳೆಪಾದ ಕೊಂಬುಗಳ ಕರಧರಿಸಿ | ಸಿರಸಾಗ್ರ ಮಧ್ಯುದರ ವೆರಸೀ ಪರ್ಣ| ದಿರುವ ಅವಯವ ಮಾಡಿ ಪಾದರ್ಪೆದ್ರನಿಸೀ2 

ಧರೆಗಧಿಕ ಸುಕ್ಷೇತ್ರ ಶೂರ್ಪಾಲಯವೆ ನೋಡಿ | ಮೆರೆಯುತಿಹ ಕೃಷ್ಣ ವೇಣಿಯ ತೀರದಲಿ ಮೂಡಿ | ಹರಗರುಡ ಗಣಪರೋಡಗೂಡಿ ನಲಿವ | ಗುರುಮಹಿಪತಿ ಸ್ವಾಮಿ ಕಾಯೋದಯ ಮಾಡಿ3

***