ಕಾಮನ ಪೆತ್ತನ ಕೋಲೆ
ನಿಸ್ಸೀಮ ಚರಿತ್ರನ ಕೋಲೆ
ಶ್ಯಾಮಲ ಗಾತ್ರನ ಕೋಲೆ
ನಮ್ಮ ಕಾಮಿತವಿತ್ತನ ಕೋಲೆ ||ಪ||
ಕಂಜಜ ತಾತನ ಕೋಲೆ
ಧನಂಜಯ ಸೂತನ ಕೋಲೆ
ಕುಂಜರ ಗೀತನ ಕೋಲೆ
ಸುರಪುಂಜ ವಿಖ್ಯಾತನ ಕೋಲೆ ||೧||
ಶ್ರುತಿಗಳ ತಂದನ ಕೋಲೆ
ಬಲು ಮಥನಕೊದಗಿದನ ಕೋಲೆ
ಕ್ಷಿತಿಯನೆತ್ತಿದವನ ಕೋಲೆ
ಭಕ್ತ ಹಿತಕಾಗಿ ಬಂದನ ಕೋಲೆ ||೨||
ಪೃಥ್ವಿಯಳದನ ಕೋಲೆ
ಅಲ್ಲಿ ಸುತ್ತ ಸುಳಿದನ ಕೋಲೆ
ಅರ್ಥಿಗಳದನ ಕೋಲೆ
ದ್ವಾರಾವತ್ತಿಯಾಳಿದನ ಕೋಲೆ ||೩||
ಮುಕ್ತಾಮುಕ್ತ ಜಗತ್ತ
ತನ್ನ ಗಾತ್ರನ ಪೆತ್ತನ ಕೋಲೆ
ಭಕ್ತನ ವಿತ್ತ ಸಂಪತ್ತ
ಕಲಿವೊತ್ತಿ ಮಾಡಿತ್ತನ ಕೋಲೆ ||೪||
ಜಗತಿಧನ್ಯನ ಕೋಲೆ
ನಿಗಮೋಕ್ತ ವರ್ಣ್ಯನ ಕೋಲೆ
ಅಘಲೇಶಶೂನ್ಯನ ಕೋಲೆ
ಸರ್ವ ಸುಗುಣಾಬ್ಧಿಪೂರ್ಣನ ಕೋಲೆ ||೫||
ಸಿರಿಹಯವದನನ ಕೋಲೆ
ಸುಖ ಕರ ಸಿಂಧು ಮಥನನ ಕೋಲೆ
ಹರಮಾನ್ಯಸದನನ ಕೋಲೆ
ಗೋಪಿಯರ ಕಣ್ಗೆ ಮದನನ ಕೋಲೆ ||೬||
***
Kamana pettana kole
nissima charitrana kole
shyamala gatrana kole
namma kamitavittana kole ||pa||
Kanjaja tatana kole
dhananjaya sutana kole
kunjara gitana kole
surapunja vikhyatana kole ||1||
Shrutigala tandana kole
balu mathanakodagidana kole
kshitiyanettidavana kole
bhakta hitakagi bandana kole ||2||
Pruthviyaladana kole
alli sutta sulidana kole
arthigaladana kole
dvaravattiyalidana kole ||3||
Muktamukta jagatta
tanna gatrana pettana kole
bhaktana vitta sampatta
kalivotti madittana kole ||4||
Jagatidhanyana kole
nigamokta varnyana kole
aghaleshashunyana kole
sarva sugunabdhipurnana kole ||5||
Sirihayavadanana kole
sukha kara sindhu mathanana kole
haramanyasadanana kole
gopiyara kange madanana kole ||6||
***
ಕಾಮನ ಪೆತ್ತನ ಕೋಲೆ ನಿ-
ಸ್ಸೀಮ ಚರಿತ್ರನ ಕೋಲೆ
ಶ್ಯಾಮಲ ಗಾತ್ರನ ಕೋಲೆ ನಮ್ಮ
ಕಾಮಿತವಿತ್ತನ ಕೋಲೆ ಪ.
ಕಂಜಜ ತಾತನ ಕೋಲೆ ಧ
sನಂಜಯ ಸೂತನ ಕೋಲೆ
ಕುಂಜರ ಗೀತನ ಕೋಲೆ ಸುರ-
ಪುಂಜ ವಿಖ್ಯಾತನ ಕೋಲೆ 1
ಶ್ರುತಿಗಳ ತಂದನ ಕೋಲೆ ಬಲು
ಮಥನಕೊದಗಿದನ ಕೋಲೆ
ಕ್ಷಿತಿಯನೆತ್ತಿದವನ ಕೋಲೆ ಭಕ್ತ
ಹಿತಕಾಗಿ ಬಂದನÀ ಕೋಲೆ 2
ಪೃಥ್ವಿಯಳದನ ಕೋಲೆ ಅಲ್ಲಿ
ಸುತ್ತ ಸುಳಿದನ ಕೋಲೆ
ಅರ್ಥಿಗÀಳದನ ಕೋಲೆ ದ್ವಾರಾ-
ವತ್ತಿಯಾಳಿದನ ಕೋಲೆ 3
ಮುಕ್ತಾಮುಕ್ತ ಜಗತ್ತ ತನ್ನ
ಗಾತ್ರದಿ ಪೆತ್ತನ ಕೋಲೆ
ಭಕ್ತನ ವಿತ್ತ ಸಂಪತ್ತ ಕಲಿ-
ವೊತ್ತಿ ಮಾಡಿತ್ತನ ಕೋಲೆ4
ಜಗತಿಧನ್ಯನ ಕೋಲೆ
ನಿಗಮೋಕ್ತ್ತ ವಣ್ರ್ಯನ ಕೋಲೆ
ಅಘಲೇಶಶೂನ್ಯನ ಕೋಲೆ ಸರ್ವ
ಸುಗುಣಾಬ್ಧಿಪೂರ್ಣನ ಕೋಲೆ 5
ಸಿರಿಹಯವದನನ ಕೋಲೆ ಸುಖ
ಕರ ಸಿಂಧುಮಥನನ ಕೋಲೆ
ಹರಮಾನ್ಯಸದÀನನ ಕೋಲೆ ಗೋಪಿ-
ಯರ ಕಣ್ಗೆ ಮದನನ ಕೊಲೆ 6
***