Showing posts with label ಬೇಡುವೆ ವರಗಳ ಜೋಡಿಸಿ govinda. Show all posts
Showing posts with label ಬೇಡುವೆ ವರಗಳ ಜೋಡಿಸಿ govinda. Show all posts

Thursday, 14 November 2019

ಬೇಡುವೆ ವರಗಳ ಜೋಡಿಸಿ ankita govinda

by ಗೋವಿಂದದಾಸ
ಬೇಡುವೆ ವರಗಳ | ಜೋಡಿಸಿ ಕರಗಳ |ನೀಡು | ಕೃಪೆಯೊಳ ಮಾಡದೆ ಮುನಿಸುಗಳ ||ಗೋಪಾಲ||ಬೇಡನು ಮರಗಳ ನೋಡುತ ತಪಗಳ ಮಾಡಲು ವರಗಳ |ನೀಡಿದೆ ಕರುಣದೊಳ್ ||ಶ್ರೀ ಲೋಲ|| 1

ಜಪವನು ಮಾಡಲಾರೆ | ತಪವನು ಮಾಡಲಾರೆ |ಉಪವಾಸ ಮಾಡಲಾರೆ ||ಶಪಥವ ಮಾಡಲಾರೆನು || ನಿನ್ನೊಳು ನಾನೂ ||ದ್ರುಪಜೆಯುಟ್ಟ ಸೀರೆ | ಕುಪಿತಾತ್ಮ ಸೆಳೆವರೆ |ಉಪಕರಿಸಿದನ್ಯಾರೆ || ನಿಪುಣ ನೀ ದಯವ ತೋರೆ ||ಮುರಾರೆ 2

ಹುಲುನರಜನ್ಮವೆತ್ತೀ | ಹುಲುಗಾವಲೊಳು ಸುತ್ತೀ |ಹುಲು ಗೋವರ್ಧನವೆತ್ತಿ | ಹುಲುಗೈದೆ ಸುರಶಕ್ತೀ ||ಗೊಲ್ಲರೊಳ್ ಅರ್ಥೀ || ಕಲುಷವ ಬಿಡಿಸುತ್ತಿ |ಫಲ್ಗುಣಸಾರಥಿ| ಸಲಹೆನ್ನ ಮನದರ್ಥಿ |ಚೆಲುವ ಗೋವಿಂದ ಮೂರುತಿ | ದಾಸರೊಳ್ ಪ್ರೀತಿ 3
******