Showing posts with label ಮಾರಮದಘನ್ನಸಮ್ಮೀರ ಮಧ್ವಮತೋದ್ಧಾರ ankita tande varada guru gopal vittala satyabodha stutih. Show all posts
Showing posts with label ಮಾರಮದಘನ್ನಸಮ್ಮೀರ ಮಧ್ವಮತೋದ್ಧಾರ ankita tande varada guru gopal vittala satyabodha stutih. Show all posts

Thursday, 26 December 2019

ಮಾರಮದಘನ್ನಸಮ್ಮೀರ ಮಧ್ವಮತೋದ್ಧಾರ ankita tande varada guru gopal vittala satyabodha stutih


ರಾಗ – ಅಸಾವೇರಿ    ತಾಳ – ಝುಂಪೆತಾಳ

ಮಾರಮದಘನ್ನಸಮ್ಮೀರ ಮಧ್ವಮತೋ-
ದ್ಧಾರ ಶುಭಗುಣಸಾಗರ ಧೀರ | ಪ |

ಗುರುಸತ್ಯಬೋಧಾರ್ಯ ಹರಿಕರುಣದಲಿ
ಪರವರ್ಗದ ಗೆಲಿದು ಧಾರಿಣಿಯೊಳು ಮೆರೆದೆ | ಅ.ಪ |

ಮುನಿ ನಿಮ್ಮ ಮಹಿಮೆಯನು
 ತಿಳಿಯದಲೆ ದಂಡೆತ್ತಿ
ಮನಸಿಜನು ಬರಲು ಕೇಳಿ ತಾಳಿ
ಘನಮಹಿಮ ಸತ್ಯಪ್ರಿಯ ಗುರುಕರುಣ ದೃಡಕವಚ-
ವನು ಧರಿಸಿ ಧೀರರಾಗಿ ಸಾಗಿ
ಮನೋಜಯಾದೃಷ್ಟಾಂಗ ಯೋಗ
 ಸಾಧನ ಬಲದಿ
ಮಣಿಯದಲೆ ಮಾರ್ಮಲೆತು ಕಲೆತು
ಪ್ರಣವಾದಿ ಮಂತ್ರ ಪ್ರತಿಪಾದ್ಯ ಮೂರ್ತಿಗಳ ಚ-
ಮ್ಮೊನೆ ಮಾಡಿ ಅರಿಷ್ಟತನ ಹಣಿದು ಓಡಿಸಿದೆ     | ೧ |

ಕುಸುಮಾಸ್ತ್ರಾನಂಗನಾಗಲು
 ಉಡುಸಹಿತ ಹಿಮಗು-
ನಸಿಗಿ ನಭಕೈದಿ ನಿಂದ ಮಂದ
ಶ್ವಸನ ಮೆಲ್ಲನೆ ಜರಿಯೆ ವನಕೆ ಪೋದ ವಸಂತ
ಝುಷಮಕರ ಜಲದೊಳಡಗೆ ನಡುಗೆ
ಎಸೆವ ಶುಕ ಪಿಕ ಸಮೂಹಗಳು ಭಯಪಟ್ಟು ಬಲು
ದಶದಿಶೆಗೆ ಓಡಿಪೋಗೇ ಕೂಗೇ
ಪೊಸಮಲ್ಲಿಕಾದಿ ಕುಟ್ಮಲವಂಜಿ ಬಾಯ್ಬಿಡಲು
ಯಶೋನಿಧಿಯೆ ತವಕೀರ್ತಿ ಪಸರಿಸಿತು ಭುವನದಲಿ | ೨ |

ಮಾರನಪಜಯ ಕಂಡು ಕ್ರೋಧಾದಿ ವೈರಿಗಳು 
ದೂರದಲಿ ನಿಂದು ನಮಿಸೀ ಗಮಿಸೀ
ವೀರಕರ್ಣನು ತನ್ನ ಮೀರಿ ತ್ಯಾಗವ ಕಂಡು
ಸಾರೆ ರವಿಮಂಡಲವನೂ ಅವನೂ
ಧೀರ ನಿಮ್ಮ ಪಾಂಡಿತ್ಯಕಂ ಫಣಿಪ ಬಾಗಿ ಶಿರ
ಧಾರುಣಿಯ ಕೆಳಗೆ ನಡೆದ ವಿಬುಧ
ಶ್ರೀ ರಾಮ ವ್ಯಾಸ ಗೋಪಾಲವಿಠಲಾಂಘ್ರಿ
ಆರಾಧಕರೆ ನಿಮ್ಮ ಚಾರುಚರಣಕೆ ನಮಿಪೆ      | ೩|
*****

Single kruti by 3 daasarus i.e.,  tande gOpAla viTTala dAsaru, varada gOpAla viTTala dAsaru, guru gOpAla viTTala dasaru on Satyabodha Tirtharu:

Sri Gopaladasaru had three brothers.  Sri Gopaladasaru was called as Bhaganna, his brothers Seenappa, Daasappa and Rangappa. All the three were given daasatva by Sri Gopaladasaru as per the orders of Sri Vijaya dasaru. They were called as Guru gopaladasaru (Seenappa), Varada Gopala Dasaru (Dasappa) and Tande Gopala Dasaru (Rangappa). The Daasa chatustaya (gopaladaasa chatustaya) had a very good name throughout the state.  Some miscreants who could not tolerate their growth, went to Sri Satyabodha Tirtharu and tried to give misleading informations about the four brothers. 

Mahajnaani Sri Satyabodha tIrtharu knew the truth about the brothers. Sri Satyabodha Tirtharu instructed the trio Tande, Varada and Guru Gopala Vittala to do a kruti on the same subject, sitting in different places. All the three agreed. They composed a kruti, on Satyabodha Tirtharu himself. The kruti is “mAramada ghanna sammIra madhvamatOddhAra”.
********