Showing posts with label ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ vijaya vittala. Show all posts
Showing posts with label ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ vijaya vittala. Show all posts

Wednesday, 16 October 2019

ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ ankita vijaya vittala

ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ
ವಾರಿಯನು ಧರಿಸುವ ನಾರಿ ಗೌರಿ ಕೌಮಾರಿ||pa||

ಬಾಣ ಕುಂಭನೆಂಬೊ ದಾನವರೀರ್ವರು
ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ
ಕಮಲ ಗರ್ಭನವೊಲಿಸಿ ವೇಗದಲಿ
ಏನು ವರ ಬೇಡೆನಲು ನಗುತಲವನು ಸುರಿದನು ||1||

ಜಗಕ್ಕೊಡಿಯನಾವಾತ ಆತನ ತನು
ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ
ಬಗಿಯದಂತೆ ವರವನು ಪಾಲಿಸೆನಲು
ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ ||2||

ಚತುರ್ದಶ ಲೋಕವನು ಗೆದ್ದು ತ್ರಿದಶರಾ
ಮಿತಿಯಿಲ್ಲದೆ ಮಾನಭಂಗ ಮಾಡಿ
ಪತಿತರು ಈ ತೆರದಲಿರುತಿರಲು ವಿಬುಧರು
ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ||3||

ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ
ಖಳ ಕಂಸನೆಂಬುವನು ಪುಟ್ಟಿ ತನ್ನ
ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು
ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ ||4||

ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ
ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ
ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು
ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು ||5||

ಇಂತು ಪೇಳಲಿ ಅಜನು ಸಂತೋಷದಿರಲಿತ್ತ
ದಂತಿ ಗಮನಳು ಉದುಭವಿಸಿ ಬಂದು
ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ
ಅಂತಕರಾಗಿದ್ದ ಖೂಳರ ಸದೆ ಬಡಿದು ||6||

ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು
ಪರಮ ಮುನಿ ಅಗಸ್ತ್ಯ ಪೂಜಿಸಿದನು
ಶರರಾಜ ಬಂದು ಮದುವೆನೈದಲು
ಪರಮೇಷ್ಠಿ ಹರನ ಸಹಿತಲಿ ನಡೆತಂದಾ ||7||

ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ
ಮರಳೆನಿಂದರು ವರ ಸುಧೇಂದ್ರವೆಂಬೊ
ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ
ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ||8||

ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ
ಬಂದು ನವತೀರ್ಥದಲಿ ಯಾತ್ರೆ ಜನರು
ಮಿಂದಾಗಲೆ ಮನದಂತೆ ಭಕುತಿಯನಿತ್ತು
ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ||9||
***


nAri gauri kaumAri vArijAkShana caraNa
vAriyanu dharisuva nAri gauri kaumAri||pa||

bANa kuMBaneMbo dAnavarIrvaru
kShONiyoLu bandalli tapava mADi
kamala garBanavolisi vEgadali
Enu vara bEDenalu nagutalavanu suridanu ||1||

jagakkoDiyanAvAta Atana tanu
saMbandhigaLemma kollalli uLidavara
bagiyadante varavanu pAlisenalu
naguta lOkESa duruLarige sale ittA ||2||

caturdaSa lOkavanu geddu tridaSarA
mitiyillade mAnaBnga mADi
patitaru I teradalirutiralu vibudharu
catura muKage moreyiDalu harige binnaisi||3||

tiLidu kunDalanolidu dvApArAntyadali
KaLa kaMsaneMbuvanu puTTi tanna
baladali tanna anujeyara SareyuyiTTu
baLalisuvavaLigolidu avatAra mALpa yudakuladali ||4||

enna kUDalI durgi janisi baralu ava
Lanna kolluveneMdu kaMsa muniye
tanna SaktiyindA gaganakke pAri baralu
Ganna GAtukaranna maDuhi biDuvaLenalu ||5||

intu pELali ajanu santOShadiralitta
danti gamanaLu uduBavisi bandu
pinte mADida tapasu siddhisitu enagenuta
antakarAgidda KULara sade baDidu ||6||

harikRupeyiMda dakShiNa Saradhiyali nillalu
parama muni agastya pUjisidanu
SararAja baMdu maduvenaidalu
paramEShThi harana sahitali naDetandA ||7||

baralAkShaNadalli kaliyuga prAputavAge
maraLeniMdaru vara sudhEndraveMbo
puradalli pUjegoLLutalliralu itta sun
dara kanyAmaNiyAgi daSadiSige poLeyutire||8||

andAraByanAgi kanyAkumAri enisi
bandu navatIrthadali yAtre janaru
mindAgale manadante Bakutiyanittu
pondisuve vijayaviThThalana pAdadalli||9||
***