Showing posts with label ಶಿವನೆ ದುರ್ವಾಸ purandara vittala suladi ರುದ್ರ ದೇವ ಸುಳಾದಿ SHIVANE DURVAASA RUDRA DEVA SULADI. Show all posts
Showing posts with label ಶಿವನೆ ದುರ್ವಾಸ purandara vittala suladi ರುದ್ರ ದೇವ ಸುಳಾದಿ SHIVANE DURVAASA RUDRA DEVA SULADI. Show all posts

Monday 9 December 2019

ಶಿವನೆ ದುರ್ವಾಸ purandara vittala suladi ರುದ್ರ ದೇವ ಸುಳಾದಿ SHIVANE DURVAASA RUDRA DEVA SULADI

Audio by Mrs. Nandini Sripad

ಶ್ರೀ ಪುರಂದರದಾಸಾರ್ಯ ವಿರಚಿತ ರುದ್ರ ದೇವರ ಸುಳಾದಿ 

ರಾಗ ಸಾರಂಗ   ಧ್ರುವತಾಳ 

ಶಿವನೆ ದುರ್ವಾಸ ಕಾಣಿರೊ ಅಯ್ಯೊ
ಶಿವನೆ ಶುಕಯೋಗಿ ಕಾಣಿರೊ 
ಶಿವನೆ ಅಶ್ವತ್ಥಾಮ ಕಾಣಿರೊ 
ಶಿವನೆ ಜೈಗಿಷವ್ಯ
ಶಿವಗುತ್ಪತ್ತಿ ಸ್ಥಿತಿಯಿಲ್ಲಂಬಾರೇ ನೆಂಬೆ
ಶಿವ ಆದಿಯಲ್ಲಿ ಬೊಮ್ಮನ ಸುತ 
ಆ ಬೊಮ್ಮಾದಿಯಲ್ಲಿ ಅಚ್ಯುತನ ಸುತ
 ಪುರಂದರವಿಠ್ಠಲ ಒಬ್ಬನೇ ಅಜಾತ
ಶಿವನೆ ದುರ್ವಾಸ ಕಾಣಿರೊ ॥ 1 ॥

 ಮಟ್ಟತಾಳ 

ಹರಿಶಂಕರರೊಳಗೆ ಉತ್ತಮರಾರೆಂದು 
ಪರೀಕ್ಷಿಸಬೇಕೆಂದಾದಿ ಯುಗದಲ್ಲಿ 
ಸರಸಿಜ ಸಂಭವಾದಿ ಸುರಪತಿ ಸುರರು 
ಶ್ಯಾರಂಗ ಪಿನಾಕಿ ॥ 2 ॥

 ತ್ರಿಪುಟತಾಳ 

ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು 
ಶಿವನ ಬಿಲ್ಲೆಂದರಿಯರೊ ಹರನ ಬಿಲ್ಲೆಂದರಿಯರೊ 
 ಪುರಂದರವಿಠ್ಠಲ ರಾಮಚಂದ್ರ ಮುರಿದ ಬಿಲ್ಲು 
ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ
ಸುರಾಸುರರ ಭಂಗ ಬಡಿಸಿದ ಬಿಲ್ಲು 
ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ ॥ 3 ॥

 ಅಟ್ಟತಾಳ 

ಬಾಣಾಸುರನ ಭಕುತಿಗೊಲಿದು ಬಂದು ಅವನ 
ಬಾಗಿಲು ಕಾಯಿದಿದ್ದಲ್ಲವೆ ಶಿವನು 
ಬಾಹು ಸಹಸ್ರಗಳ ಕಡಿವಾಗಲಿ ಒಮ್ಮೆ
ಬೇಡೆನಲಿಲ್ಲವೊ ಶಿವನು
ಬಾಹು ಸಹಸ್ರಗಳು ಕಡೆವಾಗಲಿ
 ಪುರಂದರವಿಠ್ಠಲ ಸರ್ವೋತ್ತಮನೆಂದು
ಬಲ್ಲ ಕಾರಣ ಒಪ್ಪಿಸಿಕೊಟ್ಟ ಶಿವನು
ಬಾಹು ಸಹಸ್ರಗಳ ಕಡೆವಾಗಲಿ ॥ 4 ॥

 ಆದಿತಾಳ 

ವಿಷ್ಣುಸಹಸ್ರನಾಮಗಳು ಶಿವ ಜಪಿಸಿ ಉಪದೇಶಿಸಿದ ಗೌರಿಗೆ 
ವಿಷ್ಣುಸಹಸ್ರನಾಮಗಳ ಸಮ ರಾಮನಾಮ ಮಂತ್ರವೊ
ಭಕುತಿಯಿಂದಲಿ ರಾಮರಾಮೆಂದು ಜಪಿಸಿ
ಉಪದೇಶಿಸಿದ ಗೌರಿಗೆ 
 ಪುರಂದರವಿಠಲರೇಯಗೆ 
ಅಧಿಕ ಸಖರು ಉಮೆಶಂಕರರು ॥ 5 ॥

 ಜತೆ 

ಜಗಕೆ ಶ್ರೀಪುರಂದರವಿಠ್ಠಲನೆ ಸ್ವಾಮಿ ನಾ - ।
ಲ್ಮೊಗ ರುದ್ರೇಂದ್ರಾದಿಗಳು ಹರಿಯ ಕಿಂಕರರು ॥
**************