Showing posts with label ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ vijaya vittala. Show all posts
Showing posts with label ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ vijaya vittala. Show all posts

Thursday, 17 October 2019

ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ ankita vijaya vittala


ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ |
ಶೃಂಗಾರದಿಂದ ಗೋಪಾಂಗನೆಯ ಕೂಡ |
ತುಂಗ ವಿಲಾಸ ತಾ ರಂಗ ಕೇಳಿಯಲಿ |
ಸಂಗೀತ ಪಾಡುತ ಸಾಂಗೋಪಾಂಗದಿಂದಾ ಪ

ಹೊಳಿಯ ಜನಕೋಕುಳಿಯ ಕಲಿಸಿ |
ಗೆಳೆಯರೊಂದಾಗೆ ಕಳೆಯೆವೇರುತ್ತ |
ಅಳಿಯ ಗರುಳಬಲಿಯರರಸಿ |
ಇಳಿಯಾಳಗೋಕುಳಿ ವಸಂತವಾ |
ಹಳೆಯ ಬೊಮ್ಮನ ಬಳಿಯವಿಡಿದು |
ಪಳಿಯ ಚಲುವ ತಿಳಿಯಗೊಡದೆ 1

ಸಕ್ಕರೆದುಟಿ ಹೆಮ್ಮಕ್ಕಳು ಯೆಲ್ಲರು |
ನಕ್ಕು ಕೈಯ ಹೊಯಿದ | ಕ್ಕರದಿಂದ ತಾ |
ವರ್ಕರಾಗಿ ನಿಂದೂ ತೆಕ್ರ್ಕೊರಂಗಯೆಂದು |
ಜಿರ್ಕೊಳವಿಲಿಂದಲಿಕ್ಕಿದರು |
ಸೊಕ್ಕಿದಾ ನೆಡಸಿ ಹೊಕ್ಕು ಎರಗಿದಂ |
ತೊಕ್ಕಟರಾಗಿ ದೇವಕ್ಕಿ ತನುಜನ ಸಿಕ್ಕಿಸಿಕೊಂಡರು |
ಅಕ್ಕಟಾಬ್ಜಗಬ್ಧಿ ಉಕ್ಕಿದಂತೆ ಮನ | ಉಕ್ಕುತಲಿ 2

ನಾರಿಯರಿಂದ ಉತ್ತರವ ಲಾಲಿಸಿ |
ತುಂಬಿ ಅ |
ಪಾರನಾರಿ ಪರಿವಾರದವರ ಶರೀರವ ಮೇಲೆ | ವಿ |
ಸ್ತಾರವಾಗಿ ಕಾರಿ ವಾರಿದನು ನೀರೆರದಂತಾಗೆ |
ಆರೊಂದು ಬುದ್ಧಿಗೆ ಮೀರಿತಿದೊ ಎಂದು |
ವಾರುಣಿಪತಿ ಪಂಕೇರುಹಾಭವ ಕಂ ||
ದರವ ಬಾಗಿಸಿ ಸಾರಿದರು 3

ಮೃಗ ಧ್ವನಿದೆಗೆದು ಪಾಡಲು |
ನಗ ಬೆವರಿ ಪನ್ನಂಗ ನೋಡಾಗಲು |
ಅಗಣಿತ ಮುನಿ ಚಿಗಿದು ಪಾಡಲು |
ನಗ ಬೆವರಿ ಪನ್ನಂಗ ನೋಡಾಗಲು |
ಅಗಣಿತ ಮುನಿ ಚಿಗಿದು ಪಾಡಲು ಪೊಗಳ ಬಗೆಯಿಂದ |
ಮಣಿ ತಾರೆಗಳು ಚಂದ್ರ ನಗುತ ತಮ್ಮ ಪಥಗಳು ನಿಲಿಸಿ |
ಮಂಗಳಕರವ ಮುಗಿದು ಸೋಜಿಗ ಜಗದೊಳಗಿದು ಮಿಗಿಲೆನುತಲಿ 4

ದುಂದುಭಿ ಮೊರಿಯೆ ಧಂ ಧಂ ಧಳಾ ಎಂದು |
ವೃಂದಾರಕ ವೃಂದ ಚಂದದಿ ಪೂಮಳೆಯಂದುಗರಿಯಲು |
ಚಂದಣಗಂದಿಯ ಒಂದಾಗಿ ನಿಂದರು ವಂದಿಸುತ |
ಮಂದಹಾಸನಖ ದುಂದುಭಿ ಓಕಳಿಂದಲೆರಾರೈಪಾ
ಸಿಂಧು ಮೆರೆದ ನಾರಂದವರದ ವಿಜಯವಿಠ್ಠಲ |
ಪುರಂದರದಾಸರ ಮುಂದಾಡಿ ||5
********