Showing posts with label ಭಜಿಸೋ ಬೇಗ ಹರಿಯ ಅಜಭವಾಶ್ರಿತ ನಿಜ ದೊರೆಯ mahanidhi vittala. Show all posts
Showing posts with label ಭಜಿಸೋ ಬೇಗ ಹರಿಯ ಅಜಭವಾಶ್ರಿತ ನಿಜ ದೊರೆಯ mahanidhi vittala. Show all posts

Friday, 6 August 2021

ಭಜಿಸೋ ಬೇಗ ಹರಿಯ ಅಜಭವಾಶ್ರಿತ ನಿಜ ದೊರೆಯ ankita mahanidhi vittala

 ..

kruti by ಮಹಾನಿಧಿವಿಠಲರು mahanidhi vittalaru


ಭಜಿಸೋ ಬೇಗ ಹರಿಯ ಅಜಭವಾಶ್ರಿತ ನಿಜ ದೊರೆಯ ಪ


ಕಾಮಕ್ರೋಧವ ಬಿಟ್ಟು ಮನಸಿನೊಳಗೆ

ರಾಮ ಮೂರುತಿಯಿಟ್ಟು ಪ್ರೇಮ ತಿಳಿದಷ್ಟು

ಆದಷ್ಟು ಕಾಮಿತಾರ್ಥವ ಕೊಟ್ಟು

ಹೇಮಗರ್ಭಭವ ಸೋಮ ಸೂರ್ಯರಿಗೆಲ್ಲ 1


ನಿಯಮನ ಮಾಡುವ ಮಹಾ ದೈವವ ಬಿಟ್ಟು ಇರಸಲ್ಲ

ಜಗದೊಳಜಾಮಿಳ ಬಲ್ಲ ನಂಬಿ ಕೆಟ್ಟವರಿಲ್ಲ

ಧ್ರುವಬಲ ಇಂಬುಗೊಂಡರಲ್ಲ ತುಂಬಿದ ಸಭೆಯೊಳಾಂಬುಜಾಕ್ಷಿ

ಮಾನಗೊಂಬಾಗ ಅಂಬರ ದೃಷ್ಟಿ ಸುರಿಸಿದ2


ಒಂದೇ ಮನದಿ ಭಜಿಸೆ ಭವವೆಂಬೋ ಬಂಧನವ ಬಿಡಿಸುವ

ಮುಂದೆ ಮುಕ್ತಿಯ ಹರಿಸಿ ಕೊಡುವನು ಚಂದದಿ ಅನುಕರಿಸಿ

ಬಂಧ ಮೋಕ್ಷಪ್ರದ ಮಾನಿಧಿವಿಠಲನ

ಇಂದಿಗೂ ಮುಂದಿಗೂ ಬಿಡದೆ ನೀನೆಂದೆಂದಿಗೂ 3

***