Showing posts with label ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ prasannavenkata HAKKIYA HEGALERI BANDAVAGE NODAKKA. Show all posts
Showing posts with label ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ prasannavenkata HAKKIYA HEGALERI BANDAVAGE NODAKKA. Show all posts

Saturday, 25 December 2021

ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ankita prasannavenkata HAKKIYA HEGALERI BANDAVAGE NODAKKA





ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು 
Kruti:Sri Prasanna Venkata Dasaru

ಹಕ್ಕಿಯ ಹೆಗಲೇರಿ ಬಂದವಗೆ
ನೋಡಕ್ಕ ಮನಸೋತೆ ನಾನವಗೆ||

ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ
ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ||

ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ
ಅದಿತಿಯ ಕುಂಡಲ ಕಳಿಸಿದ ಹರಿ ವಿಧಿಸುರನೃಪರನು ಸಲಹಿದ||

ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವ
ಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ||

ನರಕಚತುರ್ದಶಿ ಪರ್ವದ ದಿನ ಹರುಷದಿ ವ್ರಕಟಾದನು ದೇವ
ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ||

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ
ಜಗದೀಶ ಪ್ರಸನ್ವೆಂಕಟೇಶನು ಭಕ್ತರಘಹಾರಿ ರವಿ ಕೋಟಿಪ್ರಕಾಶನು||
****

Hakkiya hegaleri bandavage 
noDakka manasote na navage ||pa||

Satrajitana magalettida U
Nmatta narakanolu kadida
Matte kedahida avanangava
Satigittanu ta Alinganava. ||1||

Hadinaru savira nariyara sere
Mudadinda bidisi manohara
Aditiya kundala kalasida hara
Vidhisura nruparanu salahida. ||2||

Uttama pragjotisha purava Baga
Dattage kotta varabayava
Karta krushnayyana nambide sri
Murtiya padava hondide ||3||

Naraka chaturdasi parvada diva
Harushadi prakatadanu deva
Saranagatajana vatsala ranga
Parama bagavatara pratipala ||4||

Hogali krushnayyana mahimeya mukti
Nagarada arasana kirtiya
Jagadisa prasanvenkatesana Bakta
Ragahari ravikoti prakasana. ||5||
***


ಹಕ್ಕಿಯ ಹೆಗಲೇರಿ ಬಂದವಗೆ 
ನೋಡಕ್ಕ ಮನಸೋತೆ ನಾನವಗೆ ಪ.

ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ಕಾದಿದ
ಮತ್ತೆ ಕೆಡಹಿದ ಅವನಂಗವಸತಿಗಿತ್ತನು ಆಲಿಂಗನವ 1

ಹದಿನಾರು ಸಾವಿರ ನಾರಿಯರ ಸೆರೆಮುದದಿಂದ ಬಿಡಿಸಿಮಾಮನೋಹರ
ಅದಿತಿಯಕುಂಡಲತಳೆದಾ ಹರವಿಧಿಸುರ ನೃಪರನು ಸಲಹಿದ2

ಉತ್ತಮ ಪ್ರಾಗ್ಜೋತಿಷ ಪುರವ ಭಗದತ್ತಗೆ ಕೊಟ್ಟ ವರಾಭಯವ
ಕರ್ತಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ 3

ನರಕ ಚತುರ್ದಶಿ ಪರ್ವವಹರಿಹರುಷದಿ ಪ್ರಕಟಿಸಿದನು ದೇವ
ಶರಣಾಗತಜನ ವತ್ಸಲ ರಂಗಪರಮಭಾಗವತರ ಪ್ರತಿಪಾಲ4

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿನಗರದ ಅರಸನ ಕೀರ್ತಿಯ
ಜಗದೀಶ ಪ್ರಸನ್ವೆಂಕಟೇಶನೆ ಭಕ್ತರಘಹಾರಿ ರವಿಕೋಟಿಕಾಶನೆ 5
***


ಹಕ್ಕಿಯ ಹೆಗಲೇರಿ ಬಂದವಗೆ ನೋ
ಡಕ್ಕ ಮನಸೋತೆ ನಾನವಗೆ || ಪ ||

ಸತ್ರಾಜಿತನ ಮಗಳೆತ್ತಿದ ಉ
ನ್ಮತ್ತ ನರಕನೊಳು ತಾ ಕಾದಿದ
ಮತ್ತೆ ಕೆಡಹಿದ ಅವನಂಗವ
ಸತಿಗಿತ್ತನು ತಾ ಆಲಿಂಗನವ || ೧ ||

ಹದಿನಾರು ಸಾವಿರ ನಾರಿಯರ ಸೆರೆ
ಮುದದಿಂದ ಬಿಡಿಸಿ ಮನೋಹರ
ಅದಿತಿಯ ಕುಂಡಲ ಕಳಸಿದಾ ಹರ
ವಿಧಿಸುರ ನೃಪರನು ಸಲಹಿದ || ೨ ||

ಉತ್ತಮ ಪ್ರಾಗ್ಜೋತಿಷ ಪುರವ ಭಗ
ದತ್ತಗೆ ಕೊಟ್ಟ ವರಾಭಯವ
ಕರ್ತ ಕೃಷ್ಣಯ್ಯನ ನಂಬಿದೆ ಶ್ರೀ -
ಮೂರ್ತಿಯ ಪಾದವ ಹೊಂದಿದೆ || ೩ ||

ನರಕ ಚತುರ್ದಶಿ ಪರ್ವದ ದಿನ 
ಹರುಷಾದಿ ಪ್ರಕಟಾದನು ದೇವ
ಶರಣಾಗತಜನ ವತ್ಸಲ ರಂಗ
ಪರಮ ಭಾಗವತರ ಪ್ರತಿಪಾಲಾ || ೪ ||

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ -
ನಗರದ ಅರಸನ ಕೀರ್ತಿಯ
ಜಗದೀಶ ಪ್ರಸನ್ವೆಂಕಟೇಶನ ಭಕ್ತ
ರಘಹಾರಿ ರವಿಕೋಟಿ ಪ್ರಕಾಶನ || ೫ ||

hakkiya hegalEri baMdavage nO
Dakka manasOte nAnavage || pa ||

satrAjitana magaLettida u
nmatta narakanoLu tA kAdida
matte keDahida avanaMgava
satigittanu tA AliMganava || 1 ||

hadinAru sAvira nAriyara sere
mudadiMda biDisi manOhara
aditiya kuMDala kaLasidA hara
vidhisura nRuparanu salahida || 2 ||

uttama prAgjOtiSha purava Baga
dattage koTTa varABayava
karta kRuShNayyana naMbide SrI -
mUrtiya pAdava hoMdide || 3 ||

naraka caturdaSi parvada dina
haruShAdi prakaTAdanu dEva
SaraNAgatajana vatsala raMga
parama BAgavatara pratipAlA || 4 ||

hogaLi kRuShNayyana mahimeya mukti -
nagarada arasana kIrtiya
jagadISa prasanveMkaTESana Bakta
raGahAri ravikOTi prakASana || 5 ||
***