Showing posts with label ಪವಮಾನ ಪಾಲಿಸೆನ್ನ ಸದ್ಗುಣಘನ್ನ varadesha vittala. Show all posts
Showing posts with label ಪವಮಾನ ಪಾಲಿಸೆನ್ನ ಸದ್ಗುಣಘನ್ನ varadesha vittala. Show all posts

Sunday, 1 August 2021

ಪವಮಾನ ಪಾಲಿಸೆನ್ನ ಸದ್ಗುಣಘನ್ನ ankita varadesha vittala

 ..

kruti by ವರದೇಶ ವಿಠಲರು varadesha vittala dasaru


ಪವಮಾನ ಪಾಲಿಸೆನ್ನ ಸದ್ಗುಣಘನ್ನ ಪ


ಪವಮಾನ ಪೊರಿಯೆನ್ನ ಕವಿಭಿರೀಡಿತ ನಿನ್ನ

ಸ್ತವನಗೈಯುವ ಮಾನವರೊಳಧಮ ನಾನು

ಪವಮಾನ ಪಾಲಿಸೆನ್ನ ಅ.ಪ


ವಿತತಸುಮಹಿಮ ಭಾರತಿ ಪತಿ ಶಿವ ಮುಖ

ದಿತಿಜಾರಿತತಿನುತ ಶ್ರುತಿ ಪ್ರತಿಪಾದ್ಯ ಆ

ನತ ಬಂಧು ತತ್ವಾಧಿ ಪತಿಗಳೊಳುತ್ತಮ

ಪ್ರಥಮಾಂಗ ಹರಿ ಪ್ರೀಯ ದ್ವಿತಿಯುಗದಲಿ ಕಪಿ -

ಸುತನಾಗಿ ನೀರಜ ಪತಿಯಪಾದದ್ವಯ

ಅತಿಹಿತದಲಿ ಸೇವಿಸಿ ಲವಣಾರ್ಣವ

ಶತಯೋಜನವ ಲಂಘಿಸಿ

ರಾಕ್ಷಸಕುಲ ಹತಗೈಸಿ ಪುರದಹಿಸಿ

ದೇವಿಯ ಸುವಾರುತಿಯ ತಿಳಿಸಿ ಭಾವಿದ್ರುಹಿಣನೆಂದೆನಿಸಿ 1


ಕುರುಕುಲದಲಿ ಕುಂತಿ ತರುಳನೆನಿಸೆ ಯುಧಿ

ಷ್ಟರನನುಜ ವೃಕೋದರ ನಾಮದಲಿಯವ

ತರಿಸಿ ಬಕಾದಿ ದುಷ್ಟರ ಶಿಕ್ಷೆಯನು ಗೈಸಿ

ಹರಿಇಚ್ಛೆಯಲಿ ವನಚರಿಸಿ ಕೀಚಕನ ಸಂ

ಹರಿಸಿ ದುಶ್ಯಾಸÀನಾದ್ಯರನೆಲ್ಲರಣದೊಳು

ದುರುಳದುರ್ಯೋಧನನಸಾನುಜಗಣ

ತ್ವರಿತಗೈಸಿ ಹನನ ವಿಜಯನಾಗಿ ಪೊರೆದೆ ಧರ್ಮಾರ್ಜುನನ

ತ್ರಿಭುವನದಿ ಸರಿಗಾಣೆ ದ್ವಿಜರಿಪು ಪದುಪಂಚಾನನ 2


ಮಣಿಮಂತ ಮೊದಲಾದದನುಜರು ಹರಿದ್ವೇಷ -

ವನು ಮಾಡಲೋಸುಗವನಿಯೊಳುದ್ಭವಿಸಿ ನಿ -

ರ್ಗುಣರೂಪ ಕ್ರೀಯ ಬ್ರಹ್ಮನೆನುತ ಹರಿಯತಾ

ನೆನಿಪ ದುರ್ಮತವನ್ನು ಘನವಾಗಿ ಪ್ರಬಲಿಸಿ

ದನುಜಾರಿಯಾಜ್ಞಾದಿ ಮುನಿಮಧ್ಯ ಸತಿಯಲ್ಲಿ

ಮುನಿಮಧ್ವನೆಂದೆನಿಸಿ ಜನಿಸಿ ಕುಮತವನು

ಶಾಸ್ತ್ರದಿ ಖಂಡಿಸಿ ಹರಿಯೆ ಪರನೆನಿಪ ಮತವಸ್ಥಾಪಿಸಿ

ಮೆರೆದೆ ಈ ಧಾರುಣಿಯೊಳು ವರದೇಶ ವಿಠಲನ ವಲಿಸೆ 3

***